ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಇತ್ತೀಚೆಗೆ ಪ್ರದರ್ಶನಗೊಳ್ಳುತ್ತಿದ್ದ ‘ಜೊತೆಗಿರುವನು ಚಂದಿರ’ ನಾಟಕಕ್ಕೆ ಕೆಲವರು ಅಡ್ಡಿಪಡಿಸಿದ್ದರು.
ನಾಟಕಕ್ಕೆ ಅಡ್ಡಿಪಡಿಸಿರುವುದನ್ನು ಖಂಡಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳ ನಡೆದಿದ್ದು, ಇದರ ಮಧ್ಯೆ ಪೊಲೀಸರು ನಾಟಕಕ್ಕೆ ಅಡ್ಡಿಪಡಿಸಿದವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.
ಶನಿವಾರದಂದು ಡಿವೈಎಸ್ಪಿ ಶಿವಾನಂದ ಅವರು, ಬಜರಂಗದಳದ ಕಾರ್ಯಕರ್ತರಾದ ಶ್ರೀಧರಾಚಾರ್, ಮಂಜಣ್ಣ ಹಾಗೂ ವಿಶ್ವ ಹಿಂದೂ ಪರಿಷತ್ನ ವಿರುಪಾಕ್ಷಪ್ಪರನ್ನು ಆನವಟ್ಟಿ ಠಾಣೆಗೆ ಕರೆಯಿಸಿ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವಂತಹ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.