ಬಹುತೇಕರು ಮನೆಯಿಂದ ಹೊರಗೆ ಹೋಗುವಾಗ ಜೇಬು ಅಥವಾ ಬ್ಯಾಗ್ ನಲ್ಲಿ ಕರ್ಚೀಫ್ ಇಟ್ಟುಕೊಂಡು ಹೋಗ್ತಾರೆ. ನಿಮ್ಮ ಜೇಬಿನಲ್ಲಿರುವ ಕರ್ಚೀಫ್ ನಿಮ್ಮ ಭಾಗ್ಯ ಹಾಗೂ ದೌರ್ಭಾಗ್ಯಕ್ಕೆ ಕಾರಣವಾಗುತ್ತೆ ಎಂಬ ವಿಷ್ಯ ನಿಮಗೆ ಗೊತ್ತಾ…? ವಾಸ್ತು ಶಾಸ್ತ್ರದ ಪ್ರಕಾರ ನೀವು ಕರ್ಚೀಫ್ ಮಡಿಸುವ ವಿಧಾನ ನಿಮ್ಮ ಅದೃಷ್ಟ ಹಾಗೂ ದುರಾದೃಷ್ಟಕ್ಕೆ ಕಾರಣವಾಗುತ್ತದೆ.
ತಪ್ಪಾಗಿ ಕರ್ಚೀಫ್ ಮಡಿಸಿದ್ರೆ ದುರ್ಭಾಗ್ಯ ನಿಮ್ಮ ಬೆನ್ನು ಹತ್ತುತ್ತದೆ. ನಾಲ್ಕು ಲಕ್ಷ್ಮಿಯ ಸಂಖ್ಯೆಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 6 ಕೂಡ ಮಂಗಳಕರ ಸಂಖ್ಯೆ. ಹಾಗಾಗಿ ಕರ್ಚೀಫನ್ನು ನಾಲ್ಕು ಅಥವಾ 6 ಫೋಲ್ಡ್ ಮಾತ್ರ ಮಾಡಬೇಕು. 3 ಅಥವಾ 5 ಫೋಲ್ಡ್ ಮಾಡಿ ಕರ್ಚೀಫನ್ನು ಜೇಬಿನಲ್ಲಿಡುವುದು ಅಶುಭ.
ಬೆಸ ಸಂಖ್ಯೆಯಲ್ಲಿ ಫೋಲ್ಡ್ ಮಾಡಿದ ಕರ್ಚೀಫನ್ನು ಎಂದೂ ಜೇಬಿನಲ್ಲಿಟ್ಟುಕೊಳ್ಳಬಾರದು. ಸಮ ಸಂಖ್ಯೆಯಲ್ಲಿ ಕರ್ಚೀಫ್ ಫೋಲ್ಡ್ ಮಾಡಿ ಜೇಬಿನಲ್ಲಿಟ್ಟುಕೊಂಡರೆ ಕೆಲಸ ಸುಲಭವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಎಂದೂ ಕೊಳಕು ಕರ್ಚೀಫನ್ನು ಬ್ಯಾಗ್ ಅಥವಾ ಕಿಸೆಯಲ್ಲಿ ಇಟ್ಟುಕೊಳ್ಳಬಾರದು. ಇದ್ರಿಂದ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಮನೆ ಮಾಡುತ್ತವೆ.
ಕರ್ಚೀಫ್ ಇಟ್ಟ ಜೇಬಿನಲ್ಲಿ ಎಂದೂ ಬೇರೆ ವಸ್ತುವನ್ನು ಇಡಬಾರದು. ಸದಾ ಲೈಟ್ ಕಲರ್ ಕರ್ಚೀಫ್ ಬಳಸಬೇಕು. ಡಾರ್ಕ್ ಬಣ್ಣದ ಕರ್ಚೀಫ್ ಒಳ್ಳೆ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ.