ಸಣ್ಣಪುಟ್ಟ ಕೆಲಸಕ್ಕೆ ಬೇಕಾಗುವ ವಸ್ತುಗಳನ್ನು ಜನರು ತಮ್ಮ ಜೇಬಿನಲ್ಲಿ ತುಂಬಿಕೊಳ್ತಾರೆ. ಕೆಲವೊಮ್ಮೆ ಹೀಗೆ ಮಾಡುವುದರಿಂದ ತನು, ಮನ, ಧನದ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವವುಂಟಾಗುತ್ತದೆ.
ಕೆಲ ವಸ್ತುಗಳು ಜೇಬು ಅಥವಾ ಪರ್ಸ್ ನಲ್ಲಿರುವುದರಿಂದ ಧನದ ವೃದ್ಧಿಯಾಗುತ್ತದೆ. ಹಾಗೆ ಕೆಲವೊಂದು ವಸ್ತುಗಳು ನಷ್ಟಕ್ಕೆ ಕಾರಣವಾಗುತ್ತವೆ. ಹಾಗಾಗಿ ನಕಾರಾತ್ಮಕ ಶಕ್ತಿ ಹೆಚ್ಚಿಸುವ ವಸ್ತುಗಳನ್ನು ಎಂದೂ ಜೇಬಿನಲ್ಲಿ ಇಡಬಾರದು.
ಕೆಲವೊಂದು ವಸ್ತುಗಳನ್ನು ಜೇಬಿನಲ್ಲಿಡುವ ಅಗತ್ಯವಿರುವುದಿಲ್ಲ. ಆದ್ರೂ ಬಟ್ಟೆ ಬದಲಾಯಿಸುವ ವೇಳೆ ಆ ಜೇಬಿನಿಂದ ಈ ಜೇಬಿಗೆ ವಸ್ತುಗಳನ್ನು ತುಂಬಿಕೊಳ್ತೇವೆ. ಹಾಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಅಶ್ಲೀಲ ಚಿತ್ರ ಅಥವಾ ಅಶ್ಲೀಲ ವಸ್ತುಗಳನ್ನು ಜೇಬಿನಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ.
ಹರಿದ ಪರ್ಸ್ ಜೇಬಿನಲ್ಲಿಡುವುದರಿಂದ ಲಕ್ಷ್ಮಿ ಮುನಿಸಿಕೊಳ್ತಾಳೆ.
ಹಳೆಯ ರಸೀದಿ, ಬಿಲ್ ಗಳನ್ನು ಜೇಬಿನಲ್ಲಿಡಬಾರದು.
ನೋಟನ್ನು ಮಡಚಿಡಬೇಡಿ. ತಿನ್ನುವ ವಸ್ತುಗಳನ್ನು ಜೇಬಿನಲ್ಲಿಡಬೇಡಿ.
ಔಷಧಿಯನ್ನು ಜೇಬಿನಲ್ಲಿಡಬೇಡಿ. ವಾಸ್ತುಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಜೇಬಿನಲ್ಲಿ ಬ್ಲೇಡ್, ಚಾಕು ಇಟ್ಟುಕೊಳ್ಳುವುದರಿಂದ ಧನ ಹಾನಿಯಾಗುತ್ತದೆ.
ನಕಲಿ ನಾಣ್ಯ ಇಡಬಾರದು.
ಹರಿದ ನೋಟು, ಈರುಳ್ಳಿ ಸಿಪ್ಪೆಯನ್ನು ಜೇಬಿನಲ್ಲಿಡಬಾರದು.
ಜೇಬಿನಲ್ಲಿರಲಿ ಈ ವಸ್ತು:
ತಾಮ್ರ ಅಥವಾ ಬೆಳ್ಳಿಯ ವಸ್ತುಗಳನ್ನಿಡುವುದು ಒಳ್ಳೆಯದು.
ಲಕ್ಷ್ಮಿ ಫೋಟೋವನ್ನು ಜೇಬಿನಲ್ಲಿಟ್ಟುಕೊಳ್ಳಿ.
ಗುರುವಿನ ಫೋಟೋ ಇಟ್ಟುಕೊಳ್ಳುವುದು ಒಳ್ಳೆಯದು.
ಅಕ್ಕಿ, ಗೋಮತಿ ಚಕ್ರ, ಕಮಲದ ಗಡ್ಡೆ, ಬೆಳ್ಳಿ ನಾಣ್ಯವನ್ನಿಟ್ಟುಕೊಳ್ಳಿ.