ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನುತುಪ್ಪದ ಸೇವನೆ ಹಲವಾರು ರೋಗಗಳಿಗೆ ರಾಮಬಾಣ. ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿದರೆ ಒಳ್ಳೆಯದು. ಇದರಿಂದ ತೂಕವೂ ಕಡಿಮೆಯಾಗುತ್ತದೆ, ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.
ಜೇನುತುಪ್ಪ ನೈಸರ್ಗಿಕ ಉತ್ಪನ್ನವಾದ್ದರಿಂದ ನಿತ್ಯ ಸೇವನೆ ಮಾಡುವುದು ಒಳ್ಳೆಯದು. ಬೆಳಿಗ್ಗೆ ಕಾಫಿ ಅಥವಾ ಚಹಾ ಕುಡಿಯುವ ಬದಲಿಗೆ ಒಂದು ಲೋಟ ನೀರಿಗೆ ಜೇನುತುಪ್ಪ ಬೆರಸಿ ಕುಡಿಯಬಹುದು. ಇದು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ. ಇದರಲ್ಲಿ ನಂಜು ನಿರೋಧಕ ಬ್ಯಾಕ್ಟೀರಿಯಾಗಳಿವೆ. ಗುಣಗಳು ಇರುತ್ತವೆ. ಇದರಿಂದ ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ.
ಮಲಬದ್ಧತೆಯನ್ನು ನಿವಾರಿಸಿ ಗಂಟಲು ನೋವು ಮತ್ತು ಕೆಮ್ಮಿನಿಂದ ನಮಗೆ ಮುಕ್ತಿ ನೀಡುತ್ತದೆ. ಇದರ ಆಂಟಿ ಆಕ್ಸಿಡೆಂಟ್ ಗುಣ ದೇಹದಲ್ಲಿ ಇರುವ ಹೆಚ್ಚಿನ ಕೊಬ್ಬನ್ನು ನಿವಾರಿಸುವುದಕ್ಕೆ ನೆರವಾಗುತ್ತದೆ. ಇದರ ಮೂಲಕ ಉತ್ತಮ ಆರೋಗ್ಯ ನಮ್ಮದಾಗುತ್ತದೆ.