ಬೆಂಗಳೂರು: ಬೈಕ್, ಕಾರುಗಳನ್ನು ಕದಿಯುತ್ತಿದ್ದ ಕಳ್ಳರು ಇದೀಗ ಜೆಸಿಬಿಯನ್ನು ಕಳ್ಳತನ ಮಾಡಿ ಹೊತ್ತೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುಬ್ರಹ್ಮಣ್ಯಪುರ ಬಳಿಯ ಮಿಲ್ಕ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಾಮಮೂರ್ತಿ ಎಂಬುವವರ ಒಡೆತನದ ಜೆಸಿಬಿಯನ್ನು ಚಾಲಕ ಲಕ್ಷ್ಮಣ್ ರಸ್ತೆ ಬದಿ ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗಾಗುವಷ್ಟರಲ್ಲಿ ರಸ್ತೆ ಬಳಿ ನಿಲ್ಲಿಸಿದ್ದ ಜೆಸಿಬಿ ನಾಪತ್ತೆಯಾಗಿದ್ದು, ಕಳ್ಳರ ಕೈಚಳಕಕ್ಕೆ ಮಾಲೀಕ ರಾಮಮೂರ್ತಿ ಶಾಕ್ ಆಗಿದ್ದಾರೆ.
ಮನೆ ಸಮೀಪವೇ ನಿಲ್ಲಿಸಿದ್ದ ಜೆಸಿಬಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಈ ಕುರಿತು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.