ಜೆಪರ್ಡಿ ಕ್ವಿಜ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದಿರುವ ಭಾರತೀಯ ಮೂಲದ ಜಸ್ಕರನ್ ಸಿಂಗ್ 1.8 ಕೋಟಿ ರೂ. ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾರೆ.
ಟೆಕ್ಸಾಸ್ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿಯಾಗಿರುವ ಸಿಂಗ್, ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಜೆಪರ್ಡಿಯಲ್ಲಿ ಭಾಗವಹಿಸಿದ್ದು ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿದ್ದಾರೆ. ಜಸ್ಕರನ್ ಸಿಂಗ್, ಆಸ್ಟಿನ್‌ನ ಮೆಕ್‌ಕಾಂಬ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 36 ವಿದ್ಯಾರ್ಥಿಗಳನ್ನು ಸೋಲಿಸಿದ ಜಸ್ಕರನ್ ಚಾಂಪಿಯನ್‌ಶಿಪ್ ಅನ್ನು ಗೆದ್ದಿದ್ದಾರೆ. ಜೆಪರ್ಡಿಯ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಸಿಂಗ್ ಗೆಲುವಿನ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜಸ್ಕರನ್ ಸಿಂಗ್ ಅವರ ವಿಜಯವನ್ನು ಆಚರಿಸಲು ಯುಟಿ ಟವರ್‌ನ ಮೇಲ್ಭಾಗವನ್ನು ಕಿತ್ತಳೆ ಬಣ್ಣದಲ್ಲಿ ಬೆಳಗಿಸಲಾಯಿತು. ನೆಟ್ಟಿಗರು ಜಸ್ಕರನ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ.