ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ.
2015ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಸಂಸ್ಥೆಯ ಮಹಾ ಸಭೆಯು ಡಿಸೆಂಬರ್ 11ರ ದಿನಾಂಕವನ್ನು ಯೋಗ ದಿನವೆಂದು ಆಚರಿಸಲು ನಿರ್ಧರಿಸಿತ್ತು. ಆದರೆ ಜೂನ್ 21ರಂದು ಸೂರ್ಯನು ಅತಿ ಹೆಚ್ಚು ಕಾಲ ಮುಳುಗದೇ ಇರುವ ಕಾರಣ, ಅಂದು ಅತ್ಯಂತ ಸುದೀರ್ಘವಾದ ದಿನವಾದ ಕಾರಣ ಈ ದಿನಾಂಕವನ್ನು ಆರಿಸಲಾಗಿದೆ.
ಪ್ರಸ್ತುತ ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಕಾರಣದಿಂದಾಗಿ ಈ ಬಾರಿಯ ಯೋಗ ದಿನಾಚರಣೆಯನ್ನು ಡಿಜಿಟಲ್ ಮೀಡಿಯಾ ಮೂಲಕ ಜನರು ತಂತಮ್ಮ ಮನೆಗಳಲ್ಲಿ ಇದ್ದುಕೊಂಡೇ ಆಚರಿಸಲಿದ್ದಾರೆ.