ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಜೂನ್ 18 ರ ಶನಿವಾರದಂದು ನೂರನೇ ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವಡಾ ನಗರದ ಹತಕೇಶ್ವರ ದೇವಾಲಯದಲ್ಲಿ ನವಚಂಡಿಕಾ ಯಜ್ಞ ಮತ್ತು ಸುಂದರಕಾಂಡ ಪ್ರವಚನ ಏರ್ಪಡಿಸಲಾಗಿದೆ.
ಜೂನ್ 17 ಮತ್ತು 18ರಂದು ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು 18ರಂದು ಗಾಂಧಿನಗರಕ್ಕೆ ತೆರಳಿ ತಮ್ಮ ತಾಯಿ ಹೀರಾ ಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.
Big News: ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ‘ಯಲ್ಲೋ’ ಅಲರ್ಟ್ ಘೋಷಣೆ
ಹೀರಾಬೆನ್ ಅವರು ಗಾಂಧಿನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ತಮ್ಮ ಕಿರಿಯ ಪುತ್ರ ಪಂಕಜ್ ಜೊತೆ ವಾಸಿಸುತ್ತಿದ್ದಾರೆ.