ತನ್ನ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಜುಲೈ ತಿಂಗಳಲ್ಲಿ 43,140 ಭಾರತೀಯರ ಖಾತೆಗಳನ್ನು ನಿಷೇಧಿಸಿದೆ.
ಈ ಪೈಕಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆ ಇನ್ನಿತರ ವಿಷಯಕ್ಕಾಗಿ 40,982 ಖಾತೆಗಳು ನಿಷೇಧಗೊಂಡಿದ್ದರೆ, ಭಯೋತ್ಪಾದನೆ ಬೆಂಬಲಿಸಿದ ಕಾರಣಕ್ಕೆ 2,152 ಖಾತೆಗಳನ್ನು ನಿಷೇಧಕ್ಕೊಳಪಡಿಸಲಾಗಿದೆ.
ಆದರೆ ಟ್ವಿಟರ್ ಸಂಸ್ಥೆಯ ಕ್ರಮಗಳು ತೃಪ್ತಿಕರವಾಗಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದ್ದು, ವಿವರಣೆ ಕೋರಿತ್ತು. ಹೀಗಾಗಿ ಟ್ವಿಟರ್ ಸಂಸ್ಥೆ ಕೇಂದ್ರ ಸರ್ಕಾರದ ವಿರುದ್ಧ ತನ್ನ ಕಾನೂನು ಹೋರಾಟ ಮುಂದುವರೆಸಿದೆ.