ಲಾಸ್ ಏಂಜಲೀಸ್: ಜೂಜಾಟಕ್ಕೆ ಹಣ ಉಪಯೋಗಿಸಿದ ಸಲುವಾಗಿ ಶಾಲೆಯಿಂದ $835,000 (6.23 ಕೋಟಿ ರೂ.) ಕದ್ದ ನನ್ (ಕ್ರೈಸ್ತ ಸನ್ಯಾಸಿನಿ)ಗೆ, ಕ್ಯಾಲಿಫೋರ್ನಿಯಾದಲ್ಲಿ ಸೋಮವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸುಮಾರು ಆರು ದಶಕಗಳ ಹಿಂದೆ ಮೇರಿ ಮಾರ್ಗರೆಟ್ ಕ್ರೂಪರ್ ಅವರು ಸೇಂಟ್ ಜೇಮ್ಸ್ ಕ್ಯಾಥೋಲಿಕ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ತಮ್ಮ ಸೇವಾ ಅವಧಿಯಲ್ಲಿ ಹಣವನ್ನು ಕದ್ದು ವಂಚನೆ ಎಸಗಿದ್ದಾಗಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಸನ್ಯಾಸಿನಿಯು ಈ ಹಣವನ್ನು ಲೇಕ್ ತಾಹೋ ಸರೋವರದಂತಹ ಸೊಗಸಾದ ರೆಸಾರ್ಟ್‌ಗಳಿಗೆ ಐಷಾರಾಮಿ ಪ್ರವಾಸಗಳನ್ನು ತೆಗೆದುಕೊಳ್ಳಲು ಬಳಸುತ್ತಿದ್ದಳು ಎನ್ನಲಾಗಿದೆ. ಅಲ್ಲಿ ಪ್ರವಾಸಿಗರು ಬೇಸಿಗೆಯಲ್ಲಿ ವಿಹಾರಕ್ಕಾಗಿ ಬರುತ್ತಾರೆ. ತಾನು ಪಾಪ ಮಾಡಿದ್ದು, ಕಾನೂನನ್ನು ಉಲ್ಲಂಘಿಸಿದ್ದೇನೆ. ತನಗೆ ಯಾವುದೇ ಕ್ಷಮೆಯಿಲ್ಲ ಎಂದು ಕ್ರೂಪರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬೋಧನೆ ಮತ್ತು ದತ್ತಿ ದೇಣಿಗೆಗಳನ್ನು ಪಾವತಿಸಲು ಶಾಲೆಗೆ ಕಳುಹಿಸಲಾದ ಹಣವನ್ನು ಸನ್ಯಾಸಿನಿಯು ರಹಸ್ಯ ಖಾತೆಗಳಿಗೆ ಹಾಕಿದ್ದರು. ಲೆಕ್ಕಪರಿಶೋಧನೆಯು ಯೋಜನೆಯನ್ನು ಬಹಿರಂಗಪಡಿಸಲು ಬೆದರಿಕೆ ಹಾಕಿದಾಗ, ಕ್ರೂಪರ್ ದೋಷಾರೋಪಣೆಯ ದಾಖಲೆಗಳನ್ನು ನಾಶಮಾಡಲು ಉದ್ಯೋಗಿಗಳಿಗೆ ಹೇಳಿದ್ದರು.
ಇದೀಗ ಸ್ವತಃ ಸನ್ಯಾಸಿನಿಯೇ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯ ಕ್ರೂಪರ್‌ಗೆ 12 ತಿಂಗಳುಗಳ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್ ಆದೇಶದ ಪ್ರಕಾರ, ಕ್ರೂಪರ್ ಶಾಲೆಗೆ $800,000 ಕ್ಕಿಂತ ಹೆಚ್ಚು ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ.