
ಮಹೇಶ್ ನಿರ್ದೇಶನದ ‘ಅಪರೂಪ’ ಚಿತ್ರದ ಟೀಸರ್ ಇದೇ ತಿಂಗಳು ಜುಲೈ 8 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಹೊಸ ಕಲಾವಿದರನ್ನೊಳೊಗೊಂಡ ಈ ಸಿನಿಮಾದಲ್ಲಿ ಸುಘೋಷ್ ನಾಯಕ ನಟನಾಗಿ ಅಭಿನಯಿಸಿದ್ದು, ರಿತಿಕ ಶ್ರೀನಿವಾಸ್, ಅಶೋಕ್, ಅರುಣಾ ಬಾಲರಾಜ್, ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಈ ಟೀಸರ್ ಅನ್ನು ಲಾಂಚ್ ಮಾಡಲಿದ್ದಾರೆ.
ಈ ಚಿತ್ರವನ್ನು ಕೆ.ಆರ್. ಮಹೇಶ್ ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ. ಈಗಾಗಲೇ ಕೊನೆಯ ಹಂತದ ಶೂಟಿಂಗ್ ನಲ್ಲಿರುವ ಚಿತ್ರತಂಡ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿಗೆ ತಲುಪುವಂತ ಸಿನಿಮಾವಿದು ಎಂದು ನಿರ್ದೇಶಕರು ಇತ್ತೀಚಿಗೆ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ.
