
ಲಿಂಗುಸ್ವಾಮಿ ನಿರ್ದೇಶನದ ರಾಮ್ ಪೋತಿನೇನಿ ನಟನೆಯ ಬಹುನಿರೀಕ್ಷೆಯ ‘ದಿ ವಾರಿಯರ್’ ಜುಲೈ 14ರಂದು ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದು, ನಾಳೆ ಸಂಜೆ 6 ಗಂಟೆಗೆ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಹೈದರಾಬಾದ್ ನಲ್ಲಿ ನೆರವೇರಿಸಲಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ ಚಿಟ್ಟೂರಿ ನಿರ್ಮಾಣ ಮಾಡಿದ್ದಾರೆ.
ರಾಮ್ ಪೋತಿನೇನಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃತಿ ಶೆಟ್ಟಿ, ಆದಿ ಪಿನಿಶೆಟ್ಟಿ, ಅಕ್ಷರಾ ಗೌಡ, ಹಾಗೂ ನದಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.
