ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜುಲೈ 1 ರಿಂದ ಹೊಸ ಕಾರ್ಮಿಕ ಕಾಯ್ದೆ ಜಾರಿಗೊಳಿಸಬಹುದು ಎಂದು ಹೇಳಲಾಗುತ್ತಿದ್ದು ಒಂದೊಮ್ಮೆ ಇದು ಅಸ್ತಿತ್ವಕ್ಕೆ ಬಂದರೆ ಕಾರ್ಮಿಕರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಿ ಉಳಿದ ಮೂರು ದಿನಗಳು ರಜೆ ಪಡೆಯಬಹುದಾಗಿದೆ.
ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಲಿದ್ದು, ಆದರೆ ಪಿಎಫ್ ಕೊಡುಗೆ ಹೆಚ್ಚಾಗಲಿದೆ. ಜೊತೆಗೆ ಕೆಲಸದ ಅವಧಿ, ಗಳಿಕೆ ರಜೆ, ಪಿಂಚಣಿ, ಉದ್ಯೋಗದ ಸ್ಥಳದ ಸ್ಥಿತಿಗತಿ ಕುರಿತಂತೆ ಹಲವು ಬದಲಾವಣೆಗಳು ಜಾರಿಗೆ ಬರುವ ಸಾಧ್ಯತೆ ಇದೆ.
ಒಟ್ಟು 20ಕ್ಕೂ ಅಧಿಕ ಕಾರ್ಮಿಕ ಕಾಯ್ದೆಗಳನ್ನು ಒಗ್ಗೂಡಿಸಿ ಕಾರ್ಮಿಕ ಸಂಹಿತೆಯನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಕನಿಷ್ಠ ಓವರ್ ಟೈಂ ಗಂಟೆಗಳು ಒಂದು ತ್ರೈಮಾಸಿಕದಲ್ಲಿ ಪ್ರಸಕ್ತ ಇರುವ 50 ಗಂಟೆಯಿಂದ 125 ಗಂಟೆಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.