ವೀರ ಸಾವರ್ಕರ್ ಅವರು ರಾಜತಾಂತ್ರಿಕ ಭಾಗವಾಗಿ ಬ್ರಿಟಿಷರಿಗೆ ಕ್ಷಮಾ ಪತ್ರ ಬರೆದು ಕೊಟ್ಟಿದ್ದರೆ ಹೊರತು ಜೀವಭಯದಿಂದ ಅಲ್ಲ ಎಂದು ಅವರ ಮರಿ ಮೊಮ್ಮಗ ಸಾತ್ಯಕಿ ಸಾವರ್ಕರ್ ತಿಳಿಸಿದ್ದಾರೆ.
ಅವರು ಮಂಗಳವಾರದಂದು ಹುಬ್ಬಳ್ಳಿ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ನಿರಾಮಯ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕಾರ್ಗಿಲ್ ವಿಜಯ್ ದಿವಸ್’ ಮತ್ತು ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ ಈ ಮಾಹಿತಿ ನೀಡಿದ್ದಾರೆ.
25 ವರ್ಷಗಳ ಎರಡು ಅವಧಿಯ ಅಂಡಮಾನ್ ಜೈಲು ಶಿಕ್ಷೆಯನ್ನು ಸಾವರ್ಕರ್ ಅವರಿಗೆ ವಿಧಿಸಿದಾಗ ಅಲ್ಲಿಂದ ಬದುಕಿ ಬರುವ ಸಾಧ್ಯತೆಯೇ ಇರಲಿಲ್ಲ. ಆದರೆ ಬ್ರಿಟಿಷರ ವಿರುದ್ಧ ರಾಜತಂತ್ರದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗುವ ಕಾರಣದಿಂದ ಕ್ಷಮಾ ಪತ್ರವನ್ನು ನೀಡಿದ್ದರು ಎಂದು ಹೇಳಿದ ಸಾತ್ಯಕಿ, ಆದರೆ ಇದನ್ನು ತಿರುಚಿ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಭಾಗಿಯಾಗಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ನುಡಿದರು.