alex Certify ಜೀವನ ಪೂರ್ತಿ ಪಡೆಯಬಹುದು ಬಂಪರ್‌ ಆದಾಯ: ಬರ್ತಿದೆ HDFC ಬಾಂಡ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನ ಪೂರ್ತಿ ಪಡೆಯಬಹುದು ಬಂಪರ್‌ ಆದಾಯ: ಬರ್ತಿದೆ HDFC ಬಾಂಡ್‌

ಎಚ್‌ಡಿಎಫ್‌ಸಿ ಹೂಡಿಕೆದಾರರಿಗೆ ಮಹತ್ವದ ಸುದ್ದಿಯಿದೆ. ಜೀವನ ಪೂರ್ತಿ ಆದಾಯ ಪಡೆಯುವಂತಹ ಅವಕಾಶ ಒದಗಿ ಬಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಇನ್ನೊಂದು ವರ್ಷದಲ್ಲಿ 50,000 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ ವಿತರಿಸುವ ನಿರ್ಧಾರ ತೆಗೆದುಕೊಂಡಿದೆ.

ಇದರಿಂದ ಸಂಗ್ರಹವಾಗುವ ಹಣವನ್ನು ಮೂಲಸೌಕರ್ಯ ವಲಯಕ್ಕೆ ಹಣಕಾಸು ಒದಗಿಸಲು ಮತ್ತು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಸತಿ ಸಾಲ ನೀಡಲು ಬಳಸಲಾಗುತ್ತದೆ. ಷೇರುದಾರರ ಅನುಮೋದನೆ ಪಡೆದ ನಂತರ, ಈ ಮೊತ್ತವನ್ನು ಖಾಸಗಿ ಹಂಚಿಕೆ ಮೂಲಕ ಸಂಗ್ರಹಿಸಲಾಗುತ್ತದೆ.

ಈ ಹಂತವು ಹೂಡಿಕೆದಾರರಿಗೆ ಬಹಳ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವಿಲ್ಲ. ನೀವು ಬ್ಯಾಂಕಿನ ಶಾಶ್ವತ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಶಾಶ್ವತ ಬಾಂಡ್‌ಗಳಿಗೆ ಯಾವುದೇ ಮೆಚ್ಯೂರಿಟಿ ಅವಧಿ ಇರುವುದಿಲ್ಲ. ಆದ್ದರಿಂದ ಬ್ಯಾಂಕ್, ಹೂಡಿಕೆದಾರರಿಗೆ ಜೀವನಕ್ಕಾಗಿ ಬಡ್ಡಿಯನ್ನು ಪಾವತಿಸುತ್ತದೆ. ಜೀವಮಾನವಿಡೀ ನಿಮಗೆ ಇದು ಆದಾಯದ ಮೂಲವಾಗುತ್ತದೆ. 10-30 ವರ್ಷಗಳ ಮೆಚ್ಯುರಿಟಿಯನ್ನು ಹೊಂದಿರುವ ದೀರ್ಘಾವಧಿಯ ಬಾಂಡ್‌ಗಳು ಸಹ ಇವೆ, ಇದರಿಂದಲೂ ನೀವು ಉತ್ತಮ ಲಾಭ ಗಳಿಸಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಕಾರ್ಯಕ್ಷಮತೆ ಉತ್ತಮವಾಗಿದೆ. ಬ್ಯಾಂಕಿನ ಲಾಭವು ವರ್ಷದಿಂದ ವರ್ಷಕ್ಕೆ ಶೇ.23ರಷ್ಟು ಏರಿಕೆಯಾಗಿದೆ.

ಇಷ್ಟೇ ಅಲ್ಲ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ರೇಣು ಕಾರ್ನಾಡ್ ಅವರನ್ನು ಮರುನೇಮಕ ಮಾಡಲು ಸಹ ನಿರ್ಧರಿಸಲಾಗಿದೆ. ರೇಣು, 2022 ಸಪ್ಟೆಂಬರ್‌ನಿಂದ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ರೇಣು 2010ರಿಂದಲೂ ವಸತಿ ಹಣಕಾಸು ಕಂಪನಿಯಾದ HDFC ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. HDFC ಬ್ಯಾಂಕ್ ಮತ್ತು HDFC ಲಿಮಿಟೆಡ್ ಇತ್ತೀಚೆಗೆ ವಿಲೀನವನ್ನು ಘೋಷಿಸಿವೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...