ಜಾತಕದಲ್ಲಿ ರಾಹು ಸ್ಥಾನ ಬಹಳ ಮುಖ್ಯ. ರಾಹು ಶುಭವಾಗಿದ್ದರೆ, ವ್ಯಕ್ತಿಯ ಮನಸ್ಸಿಗೆ ಒಳ್ಳೆಯ ಆಲೋಚನೆಗಳು ಬರುತ್ತವೆ. ಜೀವನದಲ್ಲಿ ಸಕಾರಾತ್ಮಕ ಭಾವನೆ ಬರುತ್ತದೆ.
ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ರಾಹು, ನಕಾರಾತ್ಮಕ ಸ್ಥಾನದಲ್ಲಿದ್ದರೆ ಅನೇಕ ಸಮಸ್ಯೆಗಳನ್ನು ಕಾಣಬಹುದು. ದೈಹಿಕ-ಮಾನಸಿಕ ಸಮಸ್ಯೆಗಳಿರಬಹುದು. ಕೆಲಸದಲ್ಲಿ ವೈಫಲ್ಯ. ಜಾತಕದಲ್ಲಿ ರಾಹು ಸ್ಥಾನ ಉತ್ತಮವಾಗಿದ್ದರೂ ಕೆಲವೊಮ್ಮೆ ವ್ಯಕ್ತಿಗೆ ಶುಭ ಫಲ ಲಭಿಸುವುದಿಲ್ಲ. ಇದಕ್ಕೆ ಅನೇಕ ಕಾರಣವಿದೆ.
ಮನೆಯ ಹೊಸ್ತಿಲು ಹಾಳಾಗಿದ್ದರೆ ಅಥವಾ ಮೆಟ್ಟಿಲುಗಳ ನಿರ್ಮಾಣ ತಪ್ಪಾಗಿದ್ದರೆ, ರಾಹು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೂ ನಕಾರಾತ್ಮಕ ಫಲಿತಾಂಶ ನೀಡುತ್ತಾನೆ.
ಮನೆಯ ಶೌಚಾಲಯ, ಸ್ನಾನ ಗೃಹ ಕೊಳಕಾಗಿದ್ದರೆ ಅಥವಾ ಹಾಳಾಗಿದ್ದರೆ ರಾಹು ಪ್ರಭಾವ ಬೀರುತ್ತಾನೆ.
ಮನೆಯ ಆಗ್ನೇಯ ಮೂಲೆಯಲ್ಲಿ ಕೊಳಕಿದ್ದರೂ ರಾಹು ಪ್ರಭಾವವಿರುತ್ತದೆ. ಹೊಟ್ಟೆಯ ಮೇಲೆ ಮಲಗಿದ್ರೂ ರಾಹು ಜೀವನದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಾನೆ.
ರಾಹು ಸ್ಥಾನದಲ್ಲಿ ವಾಸಿಸುವುದ್ರಿಂದ ಮತ್ತು ಮದ್ಯ ಮಾರಾಟ ಮಾಡುವ ಜಾಗದಲ್ಲಿ ವಾಸಿಸುವುದ್ರಿಂದಲೂ ರಾಹು ಪ್ರಭಾವ ಬೀರುತ್ತಾನೆ.
ಕೆಲವು ಸಂಕೇತಗಳು, ಜೀವನದಲ್ಲಿ ರಾಹು ಪ್ರಭಾವ ಬೀರಲು ಶುರು ಮಾಡಿದ್ದಾನೆ ಎಂಬುದನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿ ಹಳೆಯ ವಿಷಯಗಳನ್ನು ನೆನಪಿಸಿಕೊಂಡು ದುಃಖಿಸುತ್ತಲೆ ಇದ್ದರೆ, ಭವಿಷ್ಯದ ಕಲ್ಪನೆಗಳಲ್ಲಿ ಕಳೆದು ಹೋಗುವುದು ಇವೆಲ್ಲವೂ ರಾಹು ಪ್ರಭಾವದ ಸಂಕೇತ.
ಅನಗತ್ಯವಾಗಿ ಭಯ ಮತ್ತು ಆತಂಕ. ತಂತ್ರ-ಮಂತ್ರ ನಂಬಲು ಪ್ರಾರಂಭಿಸಿ, ನೀರು, ಬೆಂಕಿ ಮತ್ತು ಎತ್ತರದ ಪ್ರದೇಶಗಳ ಬಗ್ಗೆ ಭಯ ಕಾಡ್ತಿದ್ದರೆ, ರಾತ್ರಿಯಲ್ಲಿ ನಿದ್ರಾ ಹೀನತೆ, ಹಲವಾರು ಕೆಟ್ಟ ಕನಸುಗಳು ಖಚಿತವಲ್ಲದ ನಿರ್ಧಾರ, ಮನೆಯಲ್ಲಿ ಆಗಾಗ್ಗೆ ಜಗಳ ಎಲ್ಲವೂ ರಾಹು ಪ್ರಭಾವದ ಸಂಕೇತವಾಗಿದೆ. ಅಪಘಾತಗಳು ಹೆಚ್ಚಾಗುವುದು. ಕೆಟ್ಟ ಅಭ್ಯಾಸಕ್ಕೆ ಬಲಿಯಾಗುವುದು ಇವೆಲ್ಲವೂ ರಾಹು ಪ್ರಭಾವ ಬೀರಿದ್ದಾನೆ ಎಂಬುದನ್ನು ತೋರಿಸುತ್ತದೆ.