
ಲಿಂಬೆ ಹಣ್ಣು ಮತ್ತು ಚಮಚದ ಸ್ಪರ್ಧೆ. ಮೊಬೈಲ್ ಕೈಯಲ್ಲಿ ಹಿಡಿದು ಆಟ ಆಡುವವರಿಗೆ ಈ ಆಟ ಅಷ್ಟು ಗೊತ್ತಿರುವುದಿಲ್ಲ. ಹಳ್ಳಿ ಕಡೆಗಳಲ್ಲೆಲ್ಲ ಈ ಆಟ ಆಡುವುದು ಹೆಚ್ಚು.
ಇಲ್ಲಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಬಾಯಲ್ಲಿ ಚಮಚ ಇಟ್ಟುಕೊಂಡು ಆ ಚಮಚದ ಮೇಲೆ ಲಿಂಬೆ ಹಣ್ಣು ಇಟ್ಟುಕೊಂಡು, ಲಿಂಬೆಹಣ್ಣು ಬೀಳದೇ ಇರುವಂತೆ ನಡೆಯಬೇಕು. ಗುರಿ ಯಾರು ಮೊದಲು ತಲಪುತ್ತಾರೋ ಅವರೇ ಗೆದ್ದಂತೆ. ಎಲ್ಲರೂ ಗೆಲ್ಲುವ ಭರದಲ್ಲಿ ಓಡುತ್ತಾರೆ. ಆದರೆ ಒಬ್ಬ ಬಾಲಕ ನಿಧಾನವಾಗಿ ನಡೆಯುತ್ತಾನೆ.
ಓಡಿದವರೆಲ್ಲ ಲಿಂಬೆ ಹಣ್ಣು ಕೆಳಗೆ ಬೀಳಿಸಿಕೊಂಡು ಬಿಡುತ್ತಾರೆ. ಆ ಬಾಲಕ ಮಾತ್ರ ಗುರಿ ತಲುಪುವ ತನಕ ಲಿಂಬೆ ಹಣ್ಣು ಬೀಳಿಸುವುದಿಲ್ಲ.
ಈ ವಿಡಿಯೋ ಈಗ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. 99 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಇನ್ನೂ 1.37 ಸಾವಿರ ಜನರು ಈ ವಿಡಿಯೋವನ್ನ ಇಷ್ಟ ಪಟ್ಟಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಹುಡುಗನ ತಾಳ್ಮೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರೆ ಇನ್ನೂ ಕೆಲವರು ಇದರಿಂದ ಕಲಿಯುವುದು ತುಂಬಾ ಇದೆ ಎಂದು ಕಾಮೆಂಟ್ ಹಾಕಿದ್ದಾರೆ.