ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗ್ತನೆ ಇರುತ್ತದೆ. ಅನೇಕ ಬಾರಿ ಏನೇ ಮಾಡಿದ್ರೂ ಪರಿಹಾರ ಸಿಗುವುದಿಲ್ಲ. ಕೊನೆಯಲ್ಲಿ ಜನರು ಹೋಗೋದು ದೇವರ ಬಳಿ. ಜಾತಕ ದೋಷದಿಂದ ಕೆಲ ಸಮಸ್ಯೆಗಳು ಎದುರಾಗುತ್ತವೆ. ಜಾತಕದಲ್ಲಿ ಸೂರ್ಯ ದೋಷವಿದ್ರೆ ಅನಾರೋಗ್ಯ, ಬಡ್ತಿ ಸಿಗದಿರುವುದು, ಅಗೌರವ ನಿಮ್ಮನ್ನು ಕಾಡುತ್ತದೆ. ಅಂಥ ಸಂದರ್ಭದಲ್ಲಿ ಸೂರ್ಯನಿಗೆ ಜಲವನ್ನು ಅರ್ಪಿಸಬೇಕಾಗುತ್ತದೆ. ನೀರಿಗೆ ಕೆಂಪು ಮೆಣಸಿನ ಕಾಯಿಯನ್ನು ಹಾಕಿ, ಅರ್ಘ್ಯ ಅರ್ಪಿಸಬೇಕು.
ಇದಲ್ಲದೆ ಗೋವಿಗೆ ಆಹಾರ ನೀಡುವುದ್ರಿಂದ ಕೂಡ ಗೋವಿನ ಪಾಲನೆ ಮಾಡುವುದ್ರಿಂದ ಸೂರ್ಯ ದೋಷದಿಂದ ಮುಕ್ತಿ ಪಡೆಯಬಹುದು.
ಇನ್ನೊಂದೆಡೆ ಜಾತಕದಲ್ಲಿ ರಾಹು ಹಾಗೂ ಚಂದ್ರ ಒಟ್ಟಿಗೆ ಇದ್ರೆ ಕೂಡ ಕೆಲ ಸಮಸ್ಯೆ ಕಾಡುತ್ತದೆ. ಮಾನಸಿಕ ಸಮಸ್ಯೆ ಕಾಡುತ್ತದೆ. ವ್ಯಕ್ತಿ ಆತಂಕದಲ್ಲಿ ಜೀವನ ನಡೆಸುತ್ತಾನೆ. ಮಾನಸಿಕ ಚಡಪಡಿಕೆ ಆತನನ್ನು ಕಾಡುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗಳು ಚಂದ್ರ ಮತ್ತು ಸೂರ್ಯನ ಮಂತ್ರವನ್ನು ಪಠಿಸಬೇಕು. ಜೊತೆಗೆ ಮಹಾಮೃತ್ಯುಂಜಯ ಮಂತ್ರವನ್ನು ಹೇಳಬೇಕು. ಕುತ್ತಿಗೆಗೆ ನೀಲಿ ದಾರವನ್ನು ಕಟ್ಟಿಕೊಳ್ಳಬೇಕು. ಇದ್ರಿಂದ ಪರಿಹಾರ ಸಿಗುತ್ತದೆ.
ಒಂದ್ವೇಳೆ ಜಾತಕದಲ್ಲಿ ಶನಿ ಹಿಮ್ಮುಖವಾಗಿದ್ದರೆ ಕೃತಕ ಜೀವನ ಪ್ರದರ್ಶನಕ್ಕೆ ಜನರು ಮುಂದಾಗ್ತಾರೆ. ಒಳಗೊಂದು, ಹೊರಗೊಂದು ಭಾವನೆ ಹೊಂದಿರುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಿರುವಾಗ ಶನಿಯನ್ನು ಬಲಗೊಳಿಸಲು ಮಂತ್ರ ಪಠಿಸಬೇಕೆಂದು ಜ್ಯೋತಿಷ್ಯಿಗಳು ಹೇಳ್ತಾರೆ.