alex Certify ಜೀವದ ಹಂಗು ತೊರೆದು ನಾಗರಹಾವಿನಿಂದ ಪುತ್ರನನ್ನು ರಕ್ಷಿಸಿದ ತಾಯಿ; ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗು ತೊರೆದು ನಾಗರಹಾವಿನಿಂದ ಪುತ್ರನನ್ನು ರಕ್ಷಿಸಿದ ತಾಯಿ; ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ…!

ಇನ್ನೇನು ನಾಗರಹಾವಿನ ದಾಳಿಗೆ ಮಗು ಬಲಿಯಾಗುತ್ತೆ ಅನ್ನೋವಷ್ಟರಲ್ಲಿ ಜೀವದ ಹಂಗನ್ನು ತೊರೆದ ತಾಯಿಯು ಮಗುವನ್ನು ರಕ್ಷಿಸಿದ ಎದೆ ಝಲ್​ ಎನ್ನಿಸುವ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಭಯಾನಕ ದೃಶ್ಯದ ಸಂಪೂರ್ಣ ಘಟನಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀವ್ಸ್​ ಕಂಡಿದೆ.

ತಾಯಿ ಹಾಗೂ ಮಗು ಮನೆಯ ಹೊರಗೆ ನಿಂತಿದ್ದರು. ನಾಗರಹಾವು ಅಲ್ಲೇ ಮೆಟ್ಟಿಲ ಬಳಿ ಇತ್ತು. ಇದನ್ನು ಗಮನಿಸದ ಬಾಲಕ ಶಾಲೆಗೆ ತೆರಳುವ ಭರದಲ್ಲಿ ಹಾವನ್ನು ತುಳಿದಿದ್ದಾನೆ. ಕೋಪಗೊಂಡ ನಾಗರಹಾವು ಥಟ್ಟನೇ ಹೆಡೆಯೆತ್ತಿ ಬಾಲಕನ ಬಳಿ ನುಗ್ಗಿ ಬಂದಿದೆ.

ಇದನ್ನು ನೋಡಿದ ತಾಯಿಯು ಒಂದು ಕ್ಷಣವೂ ಯೋಚಿಸದೇ ಮಗುವನ್ನು ಥಟ್ಟನೇ ಹಾವಿನಿಂದ ದೂರ ಎಳೆದು ಪುತ್ರನನ್ನು ರಕ್ಷಿಸಿದ್ದಾಳೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ತಾಯಿಯ ಪ್ರೀತಿಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...