ಮಂಗಳೂರು: ಪತ್ನಿ ಜೀವಂತವಾಗಿದ್ದರೂ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ವಿಮೆ ಹಣ ಪಡೆದಿರುವ ವಿಷಯ ಬೆಳಕಿಗೆ ಬಂದಿದ್ದು, ಆತನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಪತ್ನಿಯ ಮರಣ ಪತ್ರ ನೀಡಿ, ವಿಮಾ ಕಂಪನಿಯಿಂದ ಈ ವ್ಯಕ್ತಿ 3,96,922 ರೂಪಾಯಿ ಹಣ ಪಡೆದಿದ್ದಾನೆ. ಈ ವ್ಯಕ್ತಿಯನ್ನು ಶಿವರಾಮ್ ಶೆಣೈ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ನಕಲಿ ಪ್ರಮಾಣ ಪತ್ರ ನೀಡಿದ್ದು, ತಿಳಿದು ಬಂದಿದೆ. ಹೀಗಾಗಿ ಆರೋಪ ಸಾಬೀತಾಗಿದ್ದಕ್ಕೆ ಕಠಿಣ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಈ ವ್ಯಕ್ತಿ ಜೀವ ವಿಮಾ ಕಚೇರಿಯಲ್ಲಿ ತನ್ನ ಹೆಂಡತಿ ಸುಮನಾ ಶೆಣೈ ಹೆಸರಿನಲಿ ಎರಡು ಎಲ್‌ಐಸಿ ಪಾಲಿಸಿ ಮಾಡಿಸಿದ್ದ. ಪತ್ನಿ ಜೀವಂತವಾಗಿದ್ದಾಗಲೇ, ನಕಲು ಪ್ರಮಾಣ ಪತ್ರ ಸೃಷ್ಟಿಸಿ, ಹಣ ಪಡೆದಿದ್ದಾನೆ.
ಈ ಕುರಿತು ವಿಮಾ ಕಂಪನಿಯ ಮ್ಯಾನೇಜರ್ ಗಣೇಶ್ ಕಾಮತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ತಪ್ಪು ಮಾಡಿರುವುದು ಸಾಬೀತಾದ ನಂತರ, ಐಪಿಸಿ 468ರಡಿ 10 ಸಾವಿರ ರೂ. ದಂಡ ಹಾಗೂ 3 ವರ್ಷ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿದೆ.
ಅಲ್ಲದೇ, ದಂಡ ಕಟ್ಟಲು ಆಗದಿದ್ದರೆ, ಒಂದು ತಿಂಗಳು ಸಾಮಾನ್ಯ ಸೆರೆವಾಸದ ಶಿಕ್ಷೆ ಕೂಡ ವಿಧಿಸಲಾಗಿದೆ. ಇದರೊಂದಿಗೆ ಐಪಿಸಿ 471, ಐಪಿಸಿ 420ರ ಅಡಿ ಶಿಕ್ಷೆ ಪ್ರಕಟಿಸಿದ್ದಾರೆ. 2ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಶಿಲ್ಪಾ ಎ.ಜಿ. ಅವರು ತೀರ್ಪು ನೀಡಿದ್ದಾರೆ. 2ನೇ ಆರೋಪಿಯಾಗಿದ್ದವರು ತಲೆ ಮರೆಸಿಕೊಂಡಿದ್ದು, ಪ್ರಕರಣ ಬೇರ್ಪಡಿಸಲಾಗಿದೆ.