ಬದಲಾದ ಜೀವನ ಶೈಲಿಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಮಲಬದ್ಧತೆಯಿಂದ ಬಳಲುತ್ತಿದ್ದರೆ ಹಣ್ಣು ಹಾಗೂ ತರಕಾರಿಯನ್ನು ಹೆಚ್ಚೆಚ್ಚು ಸೇವನೆ ಮಾಡಿ. ಇದ್ರಲ್ಲಿರುವ ಫೈಬರ್ ನಮ್ಮ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಹೊಟ್ಟೆಯಲ್ಲಿ ಸಮಸ್ಯೆ ಕಾಡಿದ್ರೆ ಇಡೀ ದಿನ ಹಾಳಾಗುತ್ತದೆ. ಯಾವುದೇ ಕೆಲಸದ ಮೇಲೆ ಆಸಕ್ತಿಯಿರುವುದಿಲ್ಲ. ಮಲಬದ್ಧತೆ ಸಮಸ್ಯೆಯಿದ್ರೂ ಅನೇಕರು ಆಹಾರದ ಮೇಲೆ ನಿಯಂತ್ರಣ ಹೇರುವುದಿಲ್ಲ. ಆಹಾರದಲ್ಲಿ ಅನ್ನ, ಆಲೂಗಡ್ಡೆ, ಬೀನ್ಸ್, ಕುಂಬಳಕಾಯಿ ಜೊತೆಗೆ ಋತುಕಾಲಿಕ ಹಣ್ಣುಗಳಾದ ಕಿತ್ತಳೆ, ಬಾಳೆ ಹಣ್ಣು, ಸೇಬು, ಪೇರಳೆ, ದ್ರಾಕ್ಷಿ, ಕಲ್ಲಂಗಡಿ, ಪಪ್ಪಾಯವನ್ನು ತಿನ್ನಬೇಕು. ಇದ್ರಲ್ಲಿರುವ ಫೈಬರ್ ನಮ್ಮ ಹೊಟ್ಟೆ ಆರೋಗ್ಯವಾಗಿರಲು ನೆರವಾಗುತ್ತದೆ.
ಅನ್ನ : ಇದು ಸುಲಭವಾಗಿ ಜೀರ್ಣವಾಗುವ ಆಹಾರ. ಮಲಬದ್ಧತೆ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ಯೂರಿಕ್ ಆಮ್ಲವನ್ನು ದೇಹದಿಂದ ಹೊರ ಹಾಕಲು ಇದು ನೆರವಾಗುತ್ತದೆ. ಪ್ರತಿ ದಿನ ಒಂದು ಮುಷ್ಠಿ ಅನ್ನ ತಿಂದು ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಿ.
ಬೀನ್ಸ್ : ಮಲಬದ್ಧತೆ ಸಮಸ್ಯೆಗೆ ಹಸಿರು ಬೀನ್ಸ್ ಪರಿಣಾಮಕಾರಿ. ಇದು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ. ನಿಯಮಿತವಾಗಿ ಮಲ ವಿಸರ್ಜನೆ ಮಾಡಲು ನೆರವಾಗುತ್ತದೆ. ಬೀನ್ಸ್ ತಿನ್ನುವುದ್ರಿಂದ ನಮ್ಮ ದೇಹಕ್ಕೆ ಪ್ರೋಟೀನ್ ಸಿಗುತ್ತದೆ.
ಆಲೂಗಡ್ಡೆ : ಆಲೂಗಡ್ಡೆಯಲ್ಲಿರುವ ಫೈಬರ್ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಬೇರೆ ಬೇರೆ ರೀತಿಯಲ್ಲಿ ಆಲೂಗಡ್ಡೆಯ ಸೇವನೆ ಮಾಡಬಹುದು.
ಕುಂಬಳಕಾಯಿ : ಸುಲಭವಾಗಿ ಜೀರ್ಣವಾಗುವ ತರಕಾರಿಗಳಲ್ಲಿ ಕುಂಬಳಕಾಯಿ ಒಂದು. ಇದ್ರಲ್ಲಿ ಫೈಬರ್ ಹಾಗೂ ನೀರು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮಲಬದ್ಧತೆ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ.