ಜ್ಯೂಸ್ ಯಾರಿಗೆ ತಾನೆ ಇಷ್ಟ ಆಗಲ್ಲಾ ಹೇಳಿ…? ಆದ್ರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ಹಣ್ಣಿನ ರಸಗಳನ್ನು ಕುಡಿಯಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಈ ಬೆಟ್ಟದ ನೆಲ್ಲಿ ಜ್ಯೂಸ್ ಅನ್ನು ಟ್ರೈ ಮಾಡಬಹುದು. ಇದರಲ್ಲಿ ಸಪೋಟವನ್ನು ಉಪಯೋಗಿಸುವುದರಿಂದ ಕಣ್ಣುಗಳಿಗೂ ಸಹ ಒಳ್ಳೆಯದು.
ಬೇಕಾಗಿರುವ ಪದಾರ್ಥಗಳು :
ಬೆಟ್ಟದ ನೆಲ್ಲಿಕಾಯಿ : 4-5 ದೊಡ್ಡ ಗಾತ್ರದ್ದು
ಸಪೋಟ : 2 ಸಣ್ಣದು
ನಿಂಬೆಹಣ್ಣಿನ ರಸ : ಒಂದು ಚಮಚ
ಶುಂಠಿ : 2 ಇಂಚಿನಷ್ಟು
ಸಕ್ಕರೆ : ಒಂದು ಚಮಚ
ಉಪ್ಪು : ಚಿಟಿಕೆ
ನೀರು : 2 ಕಪ್
ಮಾಡುವ ವಿಧಾನ : ಬೆಟ್ಟದ ನೆಲ್ಲಿ ಮತ್ತು ಸಪೋಟದ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಇದಕ್ಕೆ 2 ಕಪ್ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣಕ್ಕೆ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ, ಜಜ್ಜಿದ ಶುಂಠಿಯನ್ನು ಸೇರಿಸಿ ಮಿಕ್ಸ್ ಮಾಡಿ, ಫಿಲ್ಟರ್ ಮಾಡಿಕೊಂಡು ಒಂದು ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿಟ್ಟು ಸರ್ವ್ ಮಾಡಿ.