ಎಲ್ಲಾ ರೀತಿಯ ರೋಗಗಳಿಗೂ ವೈದ್ಯರ ಬಳಿ ಓಡಬೇಕಿಲ್ಲ. ಕೆಲವೊಂದಕ್ಕೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು.
ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ದತೆ, ಬಾಯಿ ಹುಣ್ಣು, ಪಿತ್ತ ಸಂಬಂಧಿ ತಲೆನೋವು, ವಾಂತಿ- ಇದಕ್ಕೆಲ್ಲಾ ಮನೆಮದ್ದನ್ನೇ ಪ್ರಯತ್ನಿಸಬಹುದು.
ಮನೆಯಲ್ಲಿ ಜೀರಿಗೆ ಇದ್ದರೆ ಸಾಕು. ಬಿಸಿಬಿಸಿ ನೀರಿಗೆ ಜೀರಿಗೆ ಹಾಕಿ, ಅದನ್ನು ಕುದಿಸಿ ಕುಡಿದರೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಶಮನವಾಗುತ್ತವೆ. ಜೀರ್ಣಕ್ರಿಯೆ ವೇಗವಾಗಿ ಆಗುತ್ತದೆ. ಆಗ ಯಾವ ಕಾಯಿಲೆಗಳೂ ಬರುವುದಿಲ್ಲ.
ಜೀರಿಗೆಗೆ ರಕ್ತ ಶುದ್ದಿ ಮಾಡುವ ಶಕ್ತಿ ಇದೆ. ಬಾಯಿ ರುಚಿ ಕಳೆದುಕೊಂಡರೆ ಜೀರಿಗೆ ಕಷಾಯ ಮಾಡಿ, ಅದಕ್ಕೆ ಬೆಲ್ಲ ಬೆರೆಸಿ ಕುಡಿದು ನೋಡಿ. ಒಳಗಿರುವ ಜ್ವರ, ಅದರ ಲಕ್ಷಣಗಳ ಮೂಲ ಬೇರನ್ನು ಅಲ್ಲೇ ಚಿವುಟಿ ಹಾಕುತ್ತದೆ.
ತಲೆನೋವು, ಸ್ವಲ್ಪ ಮೈ ಕೈ ನೋವಿದ್ದರೆ ಐದು ಗ್ಲಾಸ್ ನೀರಿಗೆ 6-8 ಚಮಚ ಜೀರಿಗೆ ಪುಡಿ ಹಾಕಿ, ಮೂರು ಚಮಚ ಮೆಣಸಿನ ಕಾಳು ಕುಟ್ಟಿ ಹಾಕಿ. ಒಣ ಶುಂಠಿ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ದಿನಕ್ಕೆ ಮೂರು ಬಾರಿ ಕುಡಿದರೆ ತಲೆನೋವಿನ ಜೊತೆಗೆ ಜ್ವರ ಕೂಡ ನಿವಾರಣೆಯಾಗುತ್ತದೆ.