ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ ಮೂಲಕವೇ ಇದನ್ನು ನಿವಾರಿಸಿಕೊಳ್ಳಬಹುದು.
ಎರಡು ಚಮಚ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಸೋಸಿ ಅರ್ಧ ಲಿಂಬೆಯ ರಸ ಸೇರಿಸಿ. ಖಾಲಿ ಹೊಟ್ಟೆಗೆ ಕುಡಿಯಿರಿ. ನಿಂಬೆಯಲ್ಲಿ ವಿಟಮಿನ್ ಸಿ ಇದ್ದು ದೇಹದಿಂದ ವಿಷವನ್ನು ಹೊರಹಾಕುವ ಆಂಟಿ ಅಕ್ಸಿಡೆಂಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ.
ಇದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಇದು ತೂಕ ಇಳಿಸಲು ಸಹಕಾರಿ. ಜೀರಿಗೆ ನೀರು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಇದರಿಂದ ಅನಾರೋಗ್ಯಕಾರಿ ಜಂಕ್ ಫುಡ್ ಸೇವನೆ ತಪ್ಪಿಸಬಹುದು.
ಜೀರಿಗೆ ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ ಅಪಧಮನಿ ಮತ್ತಿತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ತ್ವಚೆಯನ್ನು ಕಾಂತಿಯುತವಾಗಿ ಯೌವನಯುತವಾಗಿ ಕಾಣುವಂತೆ ಮಾಡುತ್ತದೆ.