
ಇದೀಗ, ಯುಪಿ ಪೊಲೀಸರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜೀಬ್ರಾ ಕ್ರಾಸಿಂಗ್‌ನಲ್ಲಿ ಜಿಂಕೆಯೊಂದು ಕಾಣಿಸಿಕೊಂಡಿದೆ. ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿ ವಾಹನಗಳು ನಿಂತಾಗ ಮಾತ್ರ ಅದು ರಸ್ತೆ ದಾಟಿದೆ.
ಜೀವನವು ತುಂಬಾ ಅಮೂಲ್ಯವಾಗಿದೆ. ಸಂಚಾರ ನಿಯಮಗಳ ಉಲ್ಲಂಘಿಸುವವರು ಈ ಜಿಂಕೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಸುಮಾರು 33 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಲು ಪೊಲೀಸ್ ಇಲಾಖೆ ಜನರನ್ನು ಒತ್ತಾಯಿಸಿದ ಸೃಜನಶೀಲ ಮಾರ್ಗಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಿಂಕೆಗಳು ರಸ್ತೆ ಸುರಕ್ಷತೆಯನ್ನು ಅನುಸರಿಸುತ್ತವೆ. ನಾವು ಮನುಷ್ಯರು, ನಾವು ಅದನ್ನು ಏಕೆ ಅನುಸರಿಸಬಾರದು? ದಯವಿಟ್ಟು ರಸ್ತೆ ಸುರಕ್ಷತೆಯನ್ನು ಅನುಸರಿಸಿ ಮತ್ತು ಯಾವಾಗಲೂ ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಬಳಕೆದಾರರು ಬರೆದಿದ್ದಾರೆ. ಜಿಂಕೆ ದಾಟುತ್ತಿರುವ ಸ್ಥಳವು ವಾರಣಾಸಿಯ ಸಿಗ್ರಾ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದಾರೆ.