ಮದುವೆ ಮೆರವಣಿಗೆ ವೇಳೆಯಲ್ಲಿ ನೂತನ ವಧು ಜೀಪಿನ ಬಾನೆಟ್ ಮೇಲೆ ಏರಿ ನೃತ್ಯ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್ನ ವಿಡಿಯೋ ಇದಾಗಿದ್ದು ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಲೆಹೆಂಗಾ ತೊಟ್ಟ ವಧು ಜೀಪಿನ ಬಾನೆಟ್ ಮೇಲೆ ಕುಳಿತು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ .
ಈ ಮಧುವಣಗಿತ್ತಿಯ ಸಂತೋಷವನ್ನು ನೋಡಿದರೆ ನನಗೆ ಹಂಪ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾ ಕ್ಲೈಮಾಕ್ಸ್ನಲ್ಲಿ ಆಲಿಯಾ ಭಟ್ನ ಸಂಭ್ರಮವೇ ನೆನಪಾಗುತ್ತಿದೆ. ನಾನು ಇವರಿಗೆ ಶುಭ ಹಾರೈಸುತ್ತಿದ್ದೇನೆ ಎಂದು ಈ ವಿಡಿಯೋಗೆ ದೀಪಾಂಶು ಕಬ್ರಾ ಶೀರ್ಷಿಕೆ ನೀಡಿದ್ದಾರೆ.
ಖಾಸಗಿ ಉದ್ಯೋಗದಲ್ಲಿ ಹರಿಯಾಣ ನಾಗರಿಕರಿಗೆ ಶೇ.75ರಷ್ಟು ಮೀಸಲು; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ಈ ವಿಡಿಯೋದಲ್ಲಿರುವ ವಧುವನ್ನು ಭಾವನಾ ಎಂದು ಗುರುತಿಸಲಾಗಿದೆ. ಇವರು ಬೈರಾಗರ್ನ ಐಟಿ ಉದ್ಯೋಗಿಯಾಗಿದ್ದಾರೆ.
ಭಾವನಾ ಇದೇ ರೀತಿಯಲ್ಲಿ ತಮ್ಮ ಮದುವೆಯ ಮೆರವಣಿಗೆ ಮಾಡಬೇಕೆಂದು ಬಯಸಿದ್ದರಂತೆ. ಮೊದಲು ಇದಕ್ಕೆ ಅವರ ತಂದೆ ಒಪ್ಪಿಗೆ ನೀಡಿರಲಿಲ್ಲ. ಏಕೆಂದರೆ ಮಗಳು ಈ ರೀತಿ ನೃತ್ಯ ಮಾಡಿದರೆ ಸಂಬಂಧಿಕರು ಹಾಗೂ ಗಂಡಿನ ಕಡೆಯವರು ಏನು ಅಂದುಕೊಳ್ಳಬಹುದು ಎಂಬ ಭಯ ತಂದೆಗೆ ಕಾಡಿತ್ತಂತೆ. ಆದರೆ ಭಾವನಾ ಮಾತ್ರ ನನ್ನ ಮದುವೆ ಮೆರವಣಿಗೆ ಇದೇ ರೀತಿ ಆಗಬೇಕು ಎಂದು ಹೇಳಿದ್ದಾರೆ. ಕೊನೆಗೆ ಅವರ ತಂದೆ ಮಗಳ ಆಸೆಯನ್ನು ಪೂರೈಸಿದ್ದಾರೆ.