ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ರಾಜ್ ಕಪೂರ್ ಅವರ ಐಕಾನಿಕ್ ಹಾಡು ಜೀನಾ ಯಹಾ ಮರ್ನಾ ಯಹಾ ಹಾಡನ್ನು ಹಾಡಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಜೈಪುರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಚಿನ್ ಪೈಲಟ್ ಹಾಡಿದ್ದು, ಎಲ್ಲರ ಗಮನ ಸೆಳೆದಿದೆ. ವೇದಿಕೆಯಲ್ಲಿ ಹಲವು ಜನರ ಜೊತೆ ಸೇರಿ, ಕೈಯಲ್ಲಿ ಮೈಕ್ರೋಫೋನ್ ಹಿಡಿದು ಹಾಡಿದ್ದಾರೆ. ಅವರು 1970 ರ ಚಲನಚಿತ್ರ ‘ಮೇರಾ ನಾಮ್ ಜೋಕರ್’ ಚಿತ್ರದ ಹಾಡಿನ ಕೆಲವು ಸಾಲುಗಳನ್ನು ಹಾಡಿದ್ದಾರೆ. ವೇದಿಕೆಯಲ್ಲಿದ್ದ ಇತರರು ಕೂಡ ಅವರೊಂದಿಗೆ ಕೋರಸ್ ಹಾಡಿದ್ದಾರೆ.
ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ
ಹಾಡಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸಚಿನ್ ಪೈಲಟ್, ಜೀನಾ ಯಹಾ, ಮರ್ನಾ ಯಹಾ, ಇಸ್ಕೆ ಸಿವ ಜಾನಾ ಕಹಾ ಎಂಬ ಹಾಡಿನ ಸಾಲನ್ನು ಶೀರ್ಷಿಕೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ರಾಜಕಾರಣಿಯ ಧ್ವನಿಗೆ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಸಚಿನ್ ಪೈಲಟ್ ಅವರ ಧ್ವನಿ ಬಹಳ ಮಧುರವಾಗಿದೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಸಚಿನ್ ಪೈಲಟ್ ರಾಜಸ್ಥಾನದ ಟೋಂಕ್‌ನಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ.
ಜೀನಾ ಯಹಾ ಮರ್ನಾ ಯಹಾ ಹಾಡನ್ನು ಮುಕೇಶ್ ಹಾಡಿದ್ದಾರೆ. ಶಂಕರ್ ಜೈಕಿಶನ್ ಸಂಗೀತ ಸಂಯೋಜಿಸಿದ್ದು, ಸಾಹಿತ್ಯವನ್ನು ಶೈಲೇಂದ್ರ ಮತ್ತು ಶೈಲಿ ಶೈಲೇಂದ್ರ ರಚಿಸಿದ್ದಾರೆ.