ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ.ದೇವೇಗೌಡ ಲವ್ ಬರ್ಡ್ಸ್ ಇದ್ದಂತೆ. ಯಾವಾಗ ಪ್ರೀತಿ ಹುಟ್ಟುತ್ತೆ, ಯಾವಾಗ ಬಿರುಕು ಬರುತ್ತೆ ಅವರಿಗೆ ಗೊತ್ತು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಜಿ.ಟಿ.ದೇವೇಗೌಡ ಪೂಜೆ ಮಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಇಬ್ಬರೂ ಒಂದು ರೀತಿ ಲವ್ ಬರ್ಡ್ಸ್ ಇದ್ದಂತೆ ಯಾವಾಗ ಲವ್ ಆಗುತ್ತೆ, ಯಾವಾಗ ಬಿರುಕು ಮೂಡುತ್ತೆ ಅವರಿಗೆ ಮಾತ್ರ ಗೊತ್ತು ಎಂದರು.
ಪೂಜೆ ಮಾಡಿಸಿದ ತಕ್ಷಣ ಯಾರೂ ಸಿಎಂ ಆಗಲ್ಲ, ಪೂಜೆ ಮಾಡಿದ ತಕ್ಷಣ ಮುಖ್ಯಮಂತ್ರಿ ಆಗುವುದಾದರೆ ಎಲ್ಲರೂ ಪುಜೆ ಮಾಡಿಸುತ್ತಿದ್ದರು. ದೇವಸ್ಥಾನದ ಪೂಜೆಗೆ ಆಹ್ವಾನ ಕೊಟ್ಟಿದ್ದಾರೆ, ಹೀಗಾಗಿ ಜೊತೆಯಾಗಿ ಹೋಗಿದ್ದಾರೆ ಅಷ್ಟೇ ಎಂದು ಹೇಳಿದರು.