ದೇಶದ ಸರ್ಕಾರಿ ಟೆಲಿಕಾಂ ಕಂಪನಿ BSNL, ಅತ್ಯುತ್ತಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ Jio, Airtel ಮತ್ತು Vi ನಂತಹ ಖಾಸಗಿ ಕಂಪನಿಗಳಿಗೆ ಟಕ್ಕರ್ ಕೊಡ್ತಾ ಇದೆ. ಜಿಯೋ ಮತ್ತು ಏರ್ ಟೆಲ್ ಗಿಂತಲೂ ಬೆಸ್ಟ್ ಎನಿಸಿಕೊಂಡಿರೋ BSNL ನ ಈ ರೀಚಾರ್ಜ್ ಪ್ಲಾನ್ ಬಗ್ಗೆ ಗ್ರಾಹಕರು ತಿಳಿದುಕೊಳ್ಳಲೇಬೇಕು.
BSNL 666 ರೂಪಾಯಿ ಪ್ಲಾನ್: BSNLನ ಈ ಪ್ಲಾನ್ ಬೆಲೆ 666 ರೂಪಾಯಿ. ಇದರಲ್ಲಿ ನಿಮಗೆ 110 ದಿನಗಳವರೆಗೆ ಪ್ರತಿದಿನ 2GB ಡೇಟಾ ನೀಡಲಾಗುತ್ತಿದೆ. ಒಟ್ಟಾರೆ ನಿಮಗೆ 220 GB ಇಂಟರ್ನೆಟ್ ಸಿಗುತ್ತದೆ. ಡೇಟಾ ಖಾಲಿಯಾದಾಗ, ಇಂಟರ್ನೆಟ್ ವೇಗವು 40Kbpsಗೆ ಇಳಿಕೆಯಾಗುತ್ತದೆ. ಜೊತೆಗೆ ಯಾವುದೇ ನೆಟ್ ವರ್ಕ್ ಗೆ ನೀವು ಅನಿಯಮಿತ ಕರೆಗಳನ್ನು ಮಾಡಬಹುದು. ಪ್ರತಿದಿನ 100 SMS ಉಚಿತವಾಗಿರುತ್ತದೆ. ಜೊತೆಗೆ ಉಚಿತ ಕಾಲರ್ ಟ್ಯೂನ್‌ಗಳು ಮತ್ತು ಲೋಕಧುನ್ ವಿಷಯದ ಸದಸ್ಯತ್ವವನ್ನು ಸಹ ನೀಡಲಾಗುವುದು.
ಜಿಯೋ 666 ರೂಪಾಯಿ ಪ್ಲಾನ್: ರಿಲಯನ್ಸ್ ಜಿಯೋದ 666 ರೂಪಾಯಿ ಪ್ಲಾನ್ ನಲ್ಲಿ ಕೇವಲ 84 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ರತಿದಿನ ಸಿಗೋದು 1.5 ಜಿಬಿ ಇಂಟರ್ನೆಟ್ ಮಾತ್ರ. ಒಟ್ಟಾರೆ 126 ಜಿಬಿ ಇಂಟರ್ನೆಟ್ ಅನ್ನು ನೀವು ಬಳಸಬಹುದು. ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವಿದೆ. ಜೊತೆಗೆ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ.
ಏರ್ ಟೆಲ್‌ನ 666 ರೂಪಾಯಿ ಪ್ಲಾನ್: ಇನ್ನು ಏರ್‌ಟೆಲ್ ನ 666 ರೂಪಾಯಿ ಪ್ಲಾನ್ ನಲ್ಲಿ ಕೇವಲ 77 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ರತಿದಿನ 1.5 ಜಿಬಿ ಡೇಟಾ ದೊರೆಯುತ್ತದೆ. ಅಂದ್ರೆ ಒಟ್ಟಾರೆ ನೀವು 115.5 ಜಿಬಿ ಇಂಟರ್ನೆಟ್ ಬಳಸಬಹುದು. ಅನಿಯಮಿತ ಕರೆ ಹಾಗೂ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸಿಗುತ್ತದೆ. Vi ನ 666 ರೂಪಾಯಿ ಪ್ಲಾನ್ ನಲ್ಲೂ ಇದೇ ಸೌಲಭ್ಯಗಳಿವೆ.