ಸ್ವಚ್ಛವಾದ ಮತ್ತು ತೈಲ ಮುಕ್ತ ತ್ವಚೆಯನ್ನು ಪಡೆಯುವುದು ಬಹುತೇಕರ ಕನಸು. ಕೆಲವು ಆಹಾರ ಪದಾರ್ಥಗಳೂ ಇದಕ್ಕೆ ಕಾರಣವಾಗುವುದುಂಟು.
ಕೆಲವೊಮ್ಮೆ ಆನುವಂಶಿಕ ಕಾರಣಗಳಿಂದಾಗಿ ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿರಬಹುದು. ಹದಿಹರೆಯಕ್ಕೆ ಕಾಲಿಡುವಾಗ ಹಾರ್ಮೋನ್ ಗಳ ಬದಲಾವಣೆಯೂ ಇದಕ್ಕೆ ಕಾರಣವಾಗಬಹುದು. ನೆನಪಿಡಿ ಮುಖದಲ್ಲಿ ಜಿಡ್ಡಿನಂಶ ಹೆಚ್ಚುತ್ತಿದ್ದಂತೆ ಮೊಡವೆ ಗುಳ್ಳೆಗಳೂ ಹೆಚ್ಚುತ್ತವೆ. ಹಾಗಾಗಿ ತ್ವಚೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
ಇದರ ನಿಯಂತ್ರಣಕ್ಕೆ ಮುಖ್ಯವಾಗಿ ನೀವು ಮಾಡಬೇಕಾದ್ದು ಇಷ್ಟೇ. ಕರಿದ ತಿಂಡಿಗಳಿಂದ ಸಾಧ್ಯವಾದಷ್ಟು ದೂರವಿರಿ. ಒಂದು ಸಮೋಸ ನಿಮ್ಮ ಚರ್ಮದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ…!
ಹಾಗೇ ಗರಿಗರಿಯಾದ ಪಕೋಡಾ ಮತ್ತು ಫ್ರೆಂಚ್ ಫ್ರೈಗಳು ಚರ್ಮದ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಳು ಮಾಡುತ್ತವೆ. ಬೆಣ್ಣೆ ಮತ್ತು ತುಪ್ಪದಿಂದ ತುಂಬಿದ ಎಲ್ಲಾ ಹುರಿದ ಆಹಾರ ಮತ್ತು ಗ್ರೇವಿಗಳಿಂದ ದೂರವಿರಿ.
ಬ್ರೆಡ್ ಗಳು, ಕೇಕ್ ಗಳು, ಕುಕ್ಕಿಸ್ ಗಳು, ಕ್ಯಾಂಡಿ, ಪಾಸ್ತಾ, ಪ್ಯಾನ್ ಕೇಕ್ ಗಳು ಚರ್ಮಕ್ಕೆ ಅಪಾಯಕಾರಿ. ಇವು ಕಾಲಕ್ರಮೇಣ, ಮೊಡವೆಗಳು ಮತ್ತು ಚರ್ಮಗಳಿಗೆ ಕಾರಣವಾಗುವ ಜಿಡ್ಡಿನ ಅಂಶ ಹೆಚ್ಚಿಸುತ್ತದೆ.
ಕಾರ್ನ್ ಸಿರಪ್, ಬಿಳಿ ಸಕ್ಕರೆ, ಮಿಲ್ಕ್ ಚಾಕೊಲೇಟ್, ಕೇಕ್, ಬಿಸ್ಕತ್ತು ಮತ್ತು ಐಸ್ ಕ್ರೀಮ್ ಗಳಿಂದ ಸಂಪೂರ್ಣ ದೂರವಿರಿ. ಮಳೆಗಾಲದಲ್ಲಿ ನಿಮ್ಮ ತ್ವಚೆ ಕಾಪಾಡಲು ಇಷ್ಟು ನಿರ್ಧಾರ ಮಾಡಿ. ಸಕ್ಕರೆ ಅಥವಾ ಸಿರಪ್ ಅಧಾರಿತ ಪಾನೀಯಗಳಿಂದ ಸಂಪೂರ್ಣ ದೂರವಿರಿ.