ಜಿಟಿ ಜಿಟಿ ಮಳೆಗೆ ಗರಿ ಗರಿಯಾದ ಸ್ನ್ಯಾಕ್ಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಬಹುದಾದ ಆಲೂ ಟಿಕ್ಕಿ ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
4 ಮಧ್ಯಮ ಗಾತ್ರದ ಆಲೂಗಡ್ಡೆ, 1 ಟೀ ಸ್ಪೂನ್ – ಶುಂಠಿ ಪೇಸ್ಟ್, ¾ ಟೀ ಸ್ಪೂನ್ ಗರಂ ಮಸಾಲ, ½ ಟೀ ಸ್ಪೂನ್ – ಚಾಟ್ ಮಸಾಲ, ½ ಟೀ ಸ್ಪೂನ್ – ಖಾರದ ಪುಡಿ, 2 ಟೇಬಲ್ ಸ್ಪೂನ್ – ಕೊತ್ತಂಬರಿ ಸೊಪ್ಪು, 1 – ಹಸಿಮೆಣಸು, 2 ಟೇಬಲ್ ಸ್ಪೂನ್ – ಕಾರ್ನ್ ಫ್ಲೋರ್, ಬ್ರೆಡ್ ಕ್ರಂಬ್ಸ್ – 4 ಟೇಬಲ್ ಸ್ಪೂನ್, ¾ ಟೀ ಸ್ಪೂನ್ – ಉಪ್ಪು, 2 ಟೇಬಲ್ ಸ್ಪೂನ್ – ಗೋಡಂಬಿ, 6 ಟೇಬಲ್ ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಗೆ ಹಾಕಿ 2 ಕಪ್ ನೀರು ಹಾಕಿ 4 ವಿಷಲ್ ಕೂಗಿಸಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಟ್ಟುಬಿಡಿ. ಆಮೇಲೆ ಸಿಪ್ಪೆ ತೆಗೆದು ಕೈಯಿಂದ ಚೆನ್ನಾಗಿ ಹಿಸುಕಿ.
ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಪೇಸ್ಟ್, ಗರಂ ಮಸಾಲ, ಚಾಟ್ ಮಸಾಲ, ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿ ಕೈಯಿಂದ ನಿಧಾನ ಇದನ್ನು ಟಿಕ್ಕಿ ಶೇಪ್ ಗೆ ಒತ್ತಿಕೊಳ್ಳಿ.
ನಂತರ ಒಂದು ತವಾದಲ್ಲಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಮಾಡಿಟ್ಟುಕೊಂಡ ಟಿಕ್ಕಿಯನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಾಡಿಸಿ ತವಾದ ಮೇಲೆ ಇಟ್ಟು ಶಾಲೋ ಫ್ರೈ ಮಾಡಿಕೊಳ್ಳಿ.