alex Certify ಜಾಲತಾಣಗಳಲ್ಲಿ ನೋ ಶೇವ್ ನವೆಂಬರ್ ಅಭಿಯಾನ: ಈ ತಿಂಗಳಲ್ಲಿ ಪುರುಷರು ಕ್ಷೌರ ಮಾಡುವುದಿಲ್ಲ ಏಕೆ ಗೊತ್ತಾ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣಗಳಲ್ಲಿ ನೋ ಶೇವ್ ನವೆಂಬರ್ ಅಭಿಯಾನ: ಈ ತಿಂಗಳಲ್ಲಿ ಪುರುಷರು ಕ್ಷೌರ ಮಾಡುವುದಿಲ್ಲ ಏಕೆ ಗೊತ್ತಾ?

ನವೆಂಬರ್ ಆರಂಭವಾದ ಕೂಡಲೇ ಫೇಸ್ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಅನೇಖ ಸಾಮಾಜಿಕ ಜಾಲತಾಣಗಳಲ್ಲಿ ‘ನೋ ಶೇವ್ ನವೆಂಬರ್’ ಟ್ರೆಂಡಿಂಗ್ ಶುರುವಾಗಿದೆ. ಈ ಅಭಿಯಾನಕ್ಕೂ ಪುರುಷರ ಗಡ್ಡಕ್ಕೂ ನಂಟಿದೆ. ಪ್ರತಿವರ್ಷ ನವೆಂಬರ್‌ ತಿಂಗಳಿನಲ್ಲಿ ಪುರುಷರು ಗಡ್ಡ ಶೇವ್‌ ಮಾಡಬಾರದು ಅನ್ನೋದು ಈ ಕ್ಯಾಂಪೇನ್‌ನ ಸಾರಾಂಶ. ಅಷ್ಟಕ್ಕೂ ಇದರ ಉದ್ದೇಶವೇನು ಅನ್ನೋದನ್ನು ನೋಡೋಣ.

‘ನೋ ಶೇವ್ ನವೆಂಬರ್’ ನಲ್ಲಿ, ಪುರುಷರು 30 ದಿನಗಳವರೆಗೆ ಗಡ್ಡ ತೆಗೆಯುವುದಿಲ್ಲ. ಮುಖದ ಕೂದಲು, ಗಡ್ಡ, ಮೀಸೆ ಹೀಗೆ ಏನೇ ಇದ್ದರೂ ಅದನ್ನು ಶೇವ್‌ ಮಾಡುವುದಿಲ್ಲ. ಪುರುಷರನ್ನು ಕಾಡುವ ಅನೇಕ ಕಾಯಿಲೆಗಳು ಹಾಗೂ ಪುರುಷರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಪುರುಷರಿಗೆ ಮಾರಕವಾಗಿರುವ ಪ್ರಾಸ್ಟೇಟ್ ಕ್ಯಾನ್ಸರ್, ವೃಷಣ ಕ್ಯಾನ್ಸರ್, ಕಳಪೆ ಮಾನಸಿಕ ಆರೋಗ್ಯ ಅಥವಾ ಖಿನ್ನತೆ ಮತ್ತು ದೈಹಿಕ ನಿಷ್ಕ್ರಿಯತೆ ಕುರಿತು ಜಾಗೃತಿ ಮೂಡಿಸಲು ನೋ ಶೇವ್‌ ನವೆಂಬರ್‌ ಅನ್ನು ಆಚರಿಸಲಾಗುತ್ತದೆ.

ಈ ಅಭಿಯಾನವು ಪುರುಷರು ತಮ್ಮ ಕೂದಲನ್ನು ಬೆಳೆಸುವಂತೆ ಪ್ರೋತ್ಸಾಹಿಸುತ್ತದೆ. ನವೆಂಬರ್ ತಿಂಗಳ ಪೂರ್ತಿ ಕ್ಷೌರ ಮಾಡಬೇಡಿ ಎಂಬ ಸಂದೇಶ ಇದರಲ್ಲಿದೆ. ಆದಾಗ್ಯೂ ವೃತ್ತಿಪರ ಡ್ರೆಸ್ ಕೋಡ್ ಅನ್ನು ಅನುಸರಿಸುವುದನ್ನು ಹೊರತುಪಡಿಸಿ ಕನಿಷ್ಠ ಟ್ರಿಮ್ಮಿಂಗ್‌ನೊಂದಿಗೆ, ನೀವು ಈ ಅಭಿಯಾನದಲ್ಲಿ ಭಾಗವಹಿಸಬಹುದು. ಇದು ವಿಶೇಷವಾಗಿ ಪುರುಷರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತದೆ.ಪುರುಷರಲ್ಲಿ ಸಾಮಾನ್ಯ ಕ್ಯಾನ್ಸರ್ವೃಷಣ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪುರುಷರಲ್ಲಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್‌ಗಳು.

ನೋ ಶೇವ್ ನವೆಂಬರ್ ಅಭಿಯಾನದ ಮೂಲಕ ಈ ಸಮಸ್ಯೆಗಳ ಕುರಿತು 1,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಅಭಿಯಾನದ ಮೂಲಕ  ಕ್ಯಾನ್ಸರ್ ಸಂಶೋಧನೆಗಳಿಗೆ ಪ್ರಯೋಜನವನ್ನು ನೀಡುವ ಪ್ರಯತ್ನವಾಗಿದೆ.ಕ್ಯಾನ್ಸರ್ ಒಂದು ಭಯಾನಕ ಕಾಯಿಲೆ ಎಂಬುದರಲ್ಲಿ ಸಂದೇಹವಿಲ್ಲ.  ಇದರಿಂದಾಗಿ ಪ್ರತಿ ವರ್ಷ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಹಣಕಾಸಿನ ಸಮಸ್ಯೆಯಿಂದ ಎಷ್ಟೋ ಜನರಿಗೆ ಚಿಕಿತ್ಸೆಯೇ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಈ ಅಭಿಯಾನವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳೂ ಇದನ್ನು ಬೆಂಬಲಿಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...