ಸಂಧಿನೋವು ಅಥವಾ ಜಾಯಿಂಟ್ ಪೇನ್ ಈಗಿನ ಕಾಲದಲ್ಲಿ ಕಾಮನ್. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೀಲು ನೋವು ಮಾಮೂಲಿಯಾಗಿಬಿಟ್ಟಿದೆ. ಇದಕ್ಕೆ ಪರಿಣಾಮಕಾರಿಯಾದ ಮನೆಮದ್ದುಗಳು ಇಲ್ಲಿವೆ ನೋಡಿ.
ಅರಿಶಿಣ ಹಾಗೂ ಶುಂಠಿಯನ್ನು 2 ಕಪ್ ನೀರಿನಲ್ಲಿ ಕುದಿಸಿ ಅರ್ಧ ಕಪ್ ಆದ ಮೇಲೆ ಒಂದು ಟೀಸ್ಪೂನ್ ಜೇನನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯಿರಿ.
ಅರ್ಧ ಬಿಸಿನೀರು ತುಂಬಿದ ಟಬ್ ನಲ್ಲಿ ಸೈಂಧವ ಲವಣ ಹಾಕಿ ನೋವಿರುವ ಕೀಲುಗಳನ್ನು ನೆನೆಸಿರಿ.
ನೋವಿರುವ ಕೀಲುಗಳಿಗೆ ಹಾಟ್ ಪ್ಯಾಕ್ ಅಥವಾ ಕೋಲ್ಡ್ (ಐಸ್ ಪ್ಯಾಕ್ ) ಮಾಡಿಕೊಳ್ಳುವುದರಿಂದ ಕೀಲುನೋವು ಪರಿಹಾರವಾಗುತ್ತದೆ.
ಮೆಂತ್ಯ ಕೀಲುನೋವಿಗೆ ರಾಮಬಾಣ. ನೆನೆಸಿಟ್ಟ ಮೆಂತ್ಯವನ್ನು ಬೆಳಗ್ಗೆ ತಿನ್ನಬೇಕು. ನೆನೆಸಿದ ನೀರನ್ನೂ ಕುಡಿಯಬಹುದು.
2 ಟೀಸ್ಪೂನ್ ಆಪಲ್ ಸೈಡರ್ ವಿನಿಗರ್ ಅನ್ನು ಜೇನಿನೊಂದಿಗೆ ಬಿಸಿನೀರಿಗೆ ಬೆರೆಸಿ ದಿನಕ್ಕೆ 3-4 ಬಾರಿ ಕುಡಿಯಬೇಕು.
ಕ್ಯಾರೆಟ್ ಹಾಗೂ ಲೆಮನ್ ಜ್ಯೂಸ್ ಕೀಲುನೋವಿಗೆ ಬಲು ಪರಿಣಾಮಕಾರಿಯಾದ ಔಷಧ.
ಪುದೀನಾ ಹಾಗೂ ನೀಲಗಿರಿತೈಲದ 5-6 ಹನಿಯನ್ನು ಕೊಬ್ಬರಿ ಎಣ್ಣೆ, ಆಲಿವ್ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ಕೀಲುನೋವಿರುವಲ್ಲಿ ಹಚ್ಚಿ.