ಜಾನುವಾರುಗಳಿಗೆ ವಿಮೆ ಮಾಡಿಸುವ ಕುರಿತು ಮಾಹಿತಿಯೊಂದು ಇಲ್ಲಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಈ ವಿಮೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೇಲ್ಪಟ್ಟ ಹಾಗೂ ವಿಮೆ ಮಾಡಿಸುವ ಸಮಯದಲ್ಲಿ ಗರಿಷ್ಠ ಎಂಟು ವರ್ಷಗಳಿಗೆ ಮೀರದ ಮಣಕ, ಆಕಳು, ಎಮ್ಮೆಗಳಿಗೆ ಈ ವಿಮೆ ಸೌಲಭ್ಯವಿದ್ದು, ಗರಿಷ್ಠ 70000 ಮೂಲಬೆಲೆಯವರೆಗೆ ಪ್ರೀಮಿಯಂ ಸಹಾಯಧನ ದರದ ವಿಮೆ ಲಭ್ಯವಾಗಲಿದೆ.
ಪರಿಶಿಷ್ಟರು ಮತ್ತು ಬಿಪಿಎಲ್ ಫಲಾನುಭವಿಗಳಿಗೆ ಶೇಕಡ 70ರಷ್ಟು ಸರ್ಕಾರದ ಸಹಾಯಧನ ಸಿಗಲಿದ್ದು, ಉಳಿದ ಶೇಕಡಾ 30 ನ್ನು ಫಲಾನುಭವಿ ಭರಿಸಬೇಕಾಗುತ್ತದೆ. ಇನ್ನೂ ಎಪಿಎಲ್ ಫಲಾನುಭವಿಗಳಿಗೆ ಶೇಕಡ 50ರಷ್ಟು ಸರ್ಕಾರದ ಸಹಾಯಧನವಿದ್ದು, ಉಳಿದ ಶೇಕಡಾ 50 ನ್ನು ಫಲಾನುಭವಿ ಭರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಮೀಪದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.