alex Certify ಜಾನುವಾರುಗಳಿಂದ ಹಾಲು ಉತ್ಪಾದನೆ ಹೆಚ್ಚಿಸಲು ಈ ರೈತನಿಂದ ಸಖತ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾನುವಾರುಗಳಿಂದ ಹಾಲು ಉತ್ಪಾದನೆ ಹೆಚ್ಚಿಸಲು ಈ ರೈತನಿಂದ ಸಖತ್‌ ಪ್ಲಾನ್

ನೀವು ಹೈನುಗಾರಿಕಾ ಕೃಷಿಕರೇ..? ನಿಮ್ಮ ಮನೆಯ ಹಸು ಹೆಚ್ಚು ಹಾಲು ಕೊಡಲು ಹಿಂಡಿ, ಹುಲ್ಲು ಬದಲಾಯಿಸುತ್ತಿದ್ದೀರಾ..? ಆದ್ರೂ ಹಸು ಕಡಿಮೆ ಹಾಲು ಕೊಡುತ್ತಿದೆ ಅಂತಾ ಚಿಂತೆ ಪಡುತ್ತಿದ್ರೆ ಈ ಸ್ಟೋರಿ ಓದಿ, ನೀವು ಪ್ರಯತ್ನಿಸಿ.

ಹೌದು, ಟರ್ಕಿಯ ರೈತರೊಬ್ಬರು ತಮ್ಮ ಹಸುಗಳು ಹೆಚ್ಚು ಹಾಲು ನೀಡಲು ವಿಶಿಷ್ಟವಾದ ಸರಳ ತಂತ್ರವನ್ನು ಕಂಡುಹಿಡಿದಿದ್ದಾರೆ. ಇಜ್ಜತ್ ಕೊಕಾಕ್ ಎಂಬಾತ ತನ್ನ ಹಸುಗಳಿಗೆ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಅಳವಡಿಸಿದ್ದಾರೆ. ಹಸುಗಳು ಚಳಿಗಾಲದ ಋತುವಿನಿಂದ ಕಂಗೆಟ್ಟಿವೆ ಎಂದರಿತ ಅವರು ಈ ವಿನೂತನ ಯೋಜನೆಯನ್ನು ಅನುಸರಿಸಿದ್ದಾರೆ.

ಆಹ್ಲಾದಕರ ದೃಶ್ಯಗಳು ಮತ್ತು ಶಬ್ಧಗಳು ಹಸುಗಳನ್ನು ಸಂತೋಷಪಡಿಸುತ್ತವೆ. ಇದರಿಂದ ಅವುಗಳು ಹೆಚ್ಚು ಹಾಲು ಉತ್ಪಾದಿಸುತ್ತವೆ ಎಂದು ಅಧ್ಯಯನ ವರದಿಯೊಂದು ಹೇಳುತ್ತದೆ. ಕೋಕಾಕ್ ತಮ್ಮ ಹಸುಗಳಿಗೆ ವಿಆರ್ ಹೆಡ್‌ಸೆಟ್‌ಗಳನ್ನು ಅಳವಡಿಸಿದ್ದಾರೆ. ತಮ್ಮ ಜಾನುವಾರುಗಳು ಪ್ರಕಾಶಮಾನವಾದ ಸೂರ್ಯನ ಬೆಳಕನ್ನು ಹೊಂದಿರುವ ಸೊಂಪಾದ ಹೊಲಗಳಲ್ಲಿವೆ ಎಂದು ಭಾವಿಸಬೇಕೆಂದು ಈ ರೀತಿ ಮಾಡಿದ್ದಾರೆ.

ಈ ಹೆಡ್‌ಸೆಟ್‌ಗಳನ್ನು ಬಳಸಿದ ನಂತರ ಹಸುಗಳು ಹಸಿರು ಹುಲ್ಲುಗಾವಲಿನಲ್ಲಿ ಇರುವಂತೆ ಅವುಗಳಿಗೆ ಭಾಸವಾಗುತ್ತದೆ. ಇದರಿಂದ ರಾಸುಗಳು ಕಡಿಮೆ ಒತ್ತಡವನ್ನು ಅನುಭವಿಸುತ್ತದೆ ಎಂಬುದು ರೈತ ಕೋಕಾಕ್ ನ ಅಂಬೋಣ.

ಇದೀಗ ಈ ಯೋಜನೆ ಯಶಸ್ವಿಯಾಗಿದ್ದು, ಜಾನುವಾರುಗಳು ತಮ್ಮ ಹಾಲಿನ ಉತ್ಪಾದನೆಯನ್ನು ದಿನಕ್ಕೆ 22 ಲೀಟರ್‌ನಿಂದ 27 ಲೀಟರ್‌ಗೆ ಹೆಚ್ಚಿಸಿಕೊಂಡಿದೆಯಂತೆ. ಆದರೆ, ರಾಸುಗಳಿಗೆ ಕೆಂಪು ಹಾಗೂ ಹಸಿರು ಬಣ್ಣ ಗೋಚರಿಸೋದಿಲ್ಲ. ಹೀಗಾಗಿ ತಜ್ಞರು ವಿಆರ್ ಹೆಡ್ ಸೆಟ್ ನಲ್ಲಿ ಬಣ್ಣಗಳನ್ನು ಬದಲಾಯಿಸಿದ್ದಾರೆ.

ಒಟ್ಟಾರೆ ಈ ಅಧ್ಯಯನವು ಹಸುಗಳು ಸಂತೋಷ ಮತ್ತು ಆಹ್ಲಾದಕರ ವಾತಾವರಣದಲ್ಲಿ ಹೆಚ್ಚು ಹಾಲು ಉತ್ಪಾದಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...