ಜಾತಕದಲ್ಲಿರುವ ಅನೇಕ ದೋಷಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದಲ್ಲಿ ಜಾತಕದ ದೋಷ ನಿವಾರಣೆಗೆ ಅನೇಕ ಉಪಾಯಗಳನ್ನು ಹೇಳಲಾಗಿದೆ. ಸಾಮಾನ್ಯ ಮನುಷ್ಯ ಸುಲಭವಾಗಿ ಮಾಡಬಹುದಾದ ಕೆಲಸಗಳು ಜ್ಯೋತಿಷ್ಯದಲ್ಲಿದೆ.
ಮನೆಗೆ ಅತಿಥಿಗಳು ಬಂದಾಗ ಅವರಿಗೆ ಮೊದಲು ನೀರನ್ನು ಕೊಡಬೇಕು. ಅದ್ರಲ್ಲೂ ತಣ್ಣನೆಯ ನೀರನ್ನು ಕೊಡಬೇಕೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದ್ರಿಂದ ಗುರು ಗ್ರಹದ ದೋಷ ನಿವಾರಣೆಯಾಗುತ್ತದೆ. ಜಾತಕದಲ್ಲಿ ಕಾಳಸರ್ಪದ ದೋಷವಿದ್ದರೆ ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕು.
ದೇವರ ಮನೆಯನ್ನು ಸದಾ ಸ್ವಚ್ಛವಾಗಿಡಬೇಕು. ದೇವರ ಮನೆಯಲ್ಲಿರುವ ಮೂರ್ತಿ ಹಾಗೂ ಸಾಮಗ್ರಿಗಳನ್ನು ಸುಂದರವಾಗಿ ಜೋಡಿಸಿಡಬೇಕು. ದೇವರ ಮನೆ ಸ್ವಚ್ಛವಾಗಿದ್ದರೆ ದೇವಾನುದೇವತೆಗಳು ಕೃಪೆ ತೋರುತ್ತಾರೆಂಬ ನಂಬಿಕೆಯಿದೆ. ಜಾತಕದ ದೋಷ ಕೂಡ ಕಡಿಮೆಯಾಗುತ್ತದೆ.
ಅಡುಗೆ ಮನೆ ಸ್ವಚ್ಛವಾಗಿರಬೇಕು. ವಸ್ತುಗಳು ಆ ಕಡೆ ಈ ಕಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಮಂಗಳ ಗ್ರಹದ ದೋಷ ಅಂಟಿಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು.
ಬುಧ, ಸೂರ್ಯ, ಶುಕ್ರ, ಚಂದ್ರನ ದೋಷ ಪರಿಹಾರಕ್ಕೆ ಮನೆಯ ಮುಂದೆ ಗಿಡ ನೆಟ್ಟು ಬೆಳೆಸಬೇಕು. ಮನೆ ಮುಂದೆ ಗಿಡ ನೆಟ್ಟು ಬೆಳೆಸುವುದ್ರಿಂದ ಮನಸ್ಸಿಗೆ ಶಾಂತಿಯೂ ಸಿಗುತ್ತದೆ.