ಸ್ಟ್ರೇಂಜರ್ ಥಿಂಗ್ಸ್‌ನ ಬಹು ನಿರೀಕ್ಷಿತ ಸೀಸನ್ ನಾಲ್ಕನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಉತ್ತರ ಪ್ರದೇಶ ಮತ್ತು ಮುಂಬೈನ ಪೊಲೀಸರು ತಮ್ಮ ಸಾಮಾಜಿಕ ನೆಟ್‌ವರ್ಕಿಂಗ್ ಹ್ಯಾಂಡಲ್‌ಗಳಲ್ಲಿ ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸಲು ಸರಣಿಯನ್ನು ಬಳಸಿಕೊಂಡಿದ್ದಾರೆ.
ವೈಜ್ಞಾನಿಕ ಕಾಲ್ಪನಿಕ ವೆಬ್ ಸರಣಿಯನ್ನು ಮುಖ್ಯವಾಗಿಟ್ಟುಕೊಂಡು, ಮುಂಬೈ ಪೊಲೀಸರು ರಹಸ್ಯ ಸ್ವರೂಪದಲ್ಲಿ ಟೀಸಿಂಗ್ ನಿಲ್ಲಿಸಿ ಎನ್ನುವ ಗ್ರಾಫಿಕ್ ಅನ್ನು ಟ್ವೀಟ್ ಮಾಡಿದ್ದಾರೆ. ಮುಂಬೈ ಪೊಲೀಸರು, 100 ಮತ್ತು 103 ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಥವಾ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಅವರನ್ನು ತಲುಪುವ ಮೂಲಕ ಲೈಂಗಿಕ ಕಿರುಕುಳವನ್ನು ವರದಿ ಮಾಡುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ.
ಯುಪಿ ಪೋಲೀಸ್ ಗ್ರಾಫಿಕ್ ಅನ್ನು ಪೋಸ್ಟ್ ಮಾಡಿದ್ದು, ಅನುಮಾನಾಸ್ಪದ ಅಥವಾ ನಕಲಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಒತ್ತಿಹೇಳಲಾಗಿದೆ. ಏಕೆಂದರೆ ಅವು ಹಣಕಾಸಿನ ವಂಚನೆ ಅಥವಾ ಡೇಟಾ ಕಳ್ಳತನಕ್ಕೆ ಕಾರಣವಾಗಬಹುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಮತ್ತು ಮುಂಬೈ ಪೊಲೀಸರು ಈ ಹಿಂದೆಯೂ ತಮ್ಮ ಜಾಗೃತಿ ಅಭಿಯಾನಗಳಲ್ಲಿ ಸ್ಟ್ರೇಂಜರ್ ಥಿಂಗ್ಸ್ ಉಲ್ಲೇಖಗಳನ್ನು ಬಳಸಿದ್ದಾರೆ.
https://twitter.com/MumbaiPolice/status/1530456691031977984?ref_src=twsrc%5Etfw%7Ctwcamp%5Etweetembed%7Ctwterm%5E1530456691031977984%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fup-police-mumbai-police-stranger-things-references-7942380%2F