ರನ್ನಿಂಗ್ ಹಾಗೂ ಜಾಗಿಂಗ್ ಅತ್ಯಂತ ಉಪಯುಕ್ತವಾದ ವ್ಯಾಯಾಮ. ಇದರಿಂದ ಅನೇಕ ಪ್ರಯೋಜನಗಳಿವೆ. ಆದ್ರೆ ರನ್ನಿಂಗ್ ನಲ್ಲಿ ನೀವು ತಪ್ಪು ಮಾಡಿದ್ರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಗ್ಯಾರಂಟಿ. ರನ್ನಿಂಗ್ ಹಾಗೂ ಜಾಗಿಂಗ್ ನಲ್ಲಿ ಯಾವ ರೀತಿಯ ತಪ್ಪುಗಳಾಗುತ್ತವೆ? ಅದಕ್ಕೆ ಪರಿಹಾರ ಏನು ಅನ್ನೋದನ್ನು ನೋಡೋಣ.
ಸ್ಟ್ರೆಚಿಂಗ್ : ರನ್ನರ್ಸ್ ಗೆ ಸ್ಟ್ರೆಚಿಂಗ್ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಕುಳಿತುಕೊಂಡು ಸಾಮಾನ್ಯವಾದ ಸ್ಟ್ರೆಚಿಂಗ್ ಕೂಡ ನೀವು ಮಾಡುವುದು ಸೂಕ್ತವಲ್ಲ. ಸ್ಟ್ರೆಚಿಂಗ್ ಸ್ನಾಯು ಮತ್ತು ಮೆದುಳಿನ ನಡುವಣ ಸಿಗ್ನಲ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ನಾಯುಗಳ ಶಕ್ತಿ ಕಡಿಮೆಯಾಗುತ್ತದೆ.
ಅತಿಯಾಗಿ ತಿನ್ನುವುದು : ರನ್ನಿಂಗ್ ಅಥವಾ ಜಾಗಿಂಗ್ ಗೂ ಮುನ್ನ ಅತಿಯಾಗಿ ಆಹಾರ ಸೇವಿಸಬೇಡಿ. ಅತಿಯಾಗಿ ತಿಂದರೆ ಓಡುವ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಸಹಜವಾಗಿ ಅದು ವರ್ತಿಸುವುದಿಲ್ಲ. ವ್ಯಾಯಾಮದ ಸಮಯದಲ್ಲಿ ರಕ್ತದ ಹರಿವು ಡೈವರ್ಟ್ ಆಗಿಬಿಡುತ್ತದೆ.
ಅತಿಯಾಗಿ ನೀರು ಕುಡಿಯುವುದು ಅಥವಾ ನೀರು ಕುಡಿಯದೇ ಇರುವುದು : ಓಟಕ್ಕೂ ಮುನ್ನ ಲೀಟರ್ ಗಟ್ಟಲೆ ನೀರು ಕುಡಿಯುವುದು ಉತ್ತಮವಲ್ಲ, ಹಾಗಂತ ಸ್ವಲ್ಪವೂ ನೀರು ಕುಡಿಯದೆ ರನ್ನಿಂಗ್ ಮಾಡಬಾರದು. ರನ್ನಿಂಗ್ ಗೂ ಮುನ್ನ ಸ್ವಲ್ಪ ನೀರು ಕುಡಿದು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ.
ಬಾತ್ರೂಮಿಗೆ ಹೋಗದೇ ಇರುವುದು : ಸಾಮಾನ್ಯವಾಗಿ ರನ್ನಿಂಗ್ ಹಾಗೂ ಜಾಗಿಂಗ್ ಗೂ ಮುನ್ನ ಯಾರೂ ಫ್ರೆಶ್ ಆಗಿರೋದಿಲ್ಲ. ಶೌಚಕ್ಕೆ ಹೋಗುವುದಿಲ್ಲ. ಆದ್ರೆ ಹಾಗೆ ಮಾಡುವುದು ಸೂಕ್ತವಲ್ಲ. ನಿಮ್ಮ ದೇಹ ಸಹಕರಿಸದೇ ಇದ್ದಲ್ಲಿ ರನ್ನಿಂಗ್ ಮಾಡುವುದು ಸೂಕ್ತವಲ್ಲ. ನಿಮ್ಹತ್ರ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಓಡಿ. ಕಷ್ಟಪಟ್ಟು ಓಡೋದ್ರಿಂದ ನಿಮ್ಮ ದೇಹದಲ್ಲಿ ನೋವು ಕಾಣಿಸಿಕೊಳ್ಳಬಹದು.