ಕುಸಿದು ಬೀಳುತ್ತಿರುವ ಲೋಹದ ಮೇಲ್ಛಾವಣಿಯಿಂದ ಕಾರೊಂದು ಕ್ಷಣಾರ್ಧದಲ್ಲಿ ಪಾರಾದ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಘಟನೆಯು ಡಿಸೆಂಬರ್ 19 ರಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಸಂಭವಿಸಿದೆ.
ಯೂಟ್ಯೂಬ್ ನಲ್ಲಿ ವೈರಲ್ ಹಾಗ್ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವ್ಯಕ್ತಿಯೊಬ್ಬರು ತಮ್ಮ ಫೋನ್ ನಲ್ಲಿ ಕಿಟಕಿಯಿಂದ ನೈಸರ್ಗಿಕ ವಿಕೋಪವನ್ನು ಚಿತ್ರೀಕರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಚಂಡಮಾರುತ ಅಪ್ಪಳಿಸಿತ್ತು. ವಿಡಿಯೋದಲ್ಲಿ, ಕೆಳಗಿನ ಕಿರಿದಾದ ರಸ್ತೆಯ ಮೂಲಕ ಕಾರುಗಳು ಹಾದುಹೋಗುವುದನ್ನು ವಿಡಿಯೋ ತೋರಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ಒಂದು ಕಾರು ಸ್ಥಳವನ್ನು ಹಾದುಹೋದ ನಂತರ ಲೋಹದ ಛಾವಣಿಯು ಎಲ್ಲಿಂದಲೋ ಹಾರಿಬಂದು ಬಿದ್ದಿದೆ. ಅಲ್ಲೇ ಇದ್ದ ಅಂಗಡಿ ಮೇಲೆ ಛಾವಣಿ ಅಪ್ಪಳಿಸಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಚಂಡಮಾರುತದ ಸಮಯದಲ್ಲಿ ರಸ್ತೆಯ ಮಧ್ಯದಲ್ಲಿ ಮೆಟಲ್ ರೂಫಿಂಗ್ ಹಾರುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ. 40,000ಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದು, ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಚಂಡಮಾರುತದ ಸಮಯದಲ್ಲಿ ವಾಹನ ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಎಂದು ಕೆಲವರು ಬಳಕೆದಾರರು ಹೇಳಿದ್ರೆ, ಇತರರು ಕಾರಿನ ಚಾಲಕ ಅತ್ಯಂತ ಅದೃಷ್ಟಶಾಲಿ ಎಂದು ಹೇಳಿದ್ದಾರೆ.