ಹೆಚ್ಚು ಜನಪ್ರಿಯರಾಗಲು ಕೆಲವರು ಹುಚ್ಚು ಸಾಹಸಗಳನ್ನು ಮಾಡುವುದುಂಟು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆಯಲು, ರಾತ್ರೋರಾತ್ರಿ ಫೇಮಸ್ ಆಗಲು ಜೀವವನ್ನು ಪಣಕ್ಕಿಡುವುದೂ ಉಂಟು. ಬೈಸಿಕಲ್‌ಗಳು, ಮೋಟಾರ್ ಬೈಕ್‌ಗಳು, ಸ್ಕೇಟ್ ಬೋರ್ಡ್‌ಗಳು, ಸ್ಕೀಯಿಂಗ್ ಹೀಗೆ ಹಲವಾರು ಅಪಾಯಕಾರಿ ಆಟಗಳನ್ನು ಆಡುವ ಮೂಲಕ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.
ಅಂಥದ್ದೇ ಒಂದು ಭಯಬೀಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ಈ ಯುವತಿ. ಬೃಹತ್ ಜಲಪಾತವನ್ನು ಆಯ್ಕೆ ಮಾಡಿಕೊಂಡಿರುವ ಯುವತಿಯೊಬ್ಬಳು ಅತ್ಯಂತ ಅಪಾಯಕಾರಿ ಎನ್ನುವ ಸಾಹಸ ಮಾಡಿದ್ದಾಳೆ. ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಬಿಕಿನಿ ತೊಟ್ಟು ಬೃಹತ್ ವಿಕ್ಟೋರಿಯಾ ಜಲಪಾತದ ಅಂಚಿನಲ್ಲಿ ಮಲಗಿರುವುದನ್ನು ನೋಡಬಹುದು.
ಅಲ್ಲಿಂದ ನೂರಾರು ಅಡಿ ಆಳವನ್ನೂ ಕಾಣಬಹುದು. ಆಕೆ ಸ್ವಲ್ಪವೂ ವಿಚಲಿತಳಾಗಿಲ್ಲ, ಆದರೆ ನೋಡುಗರ ಎದೆ ಮಾತ್ರ ಝಲ್ ಎನ್ನುತ್ತದೆ. ಟ್ವಿಟ್ಟರ್‌ನಲ್ಲಿ @OTerrifying ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಯುವತಿ 380 ಅಡಿಗಳಷ್ಟು ಬೃಹತ್ ಕುಸಿತದ ಮೊದಲು ಇಂಚುಗಳಷ್ಟು ಕೆಳಗೆ ಮಲಗಿದ್ದಾಳೆ ಎಂದು ಬರೆದಿದ್ದಾರೆ.
https://twitter.com/OTerrifying/status/1616285401135579137?ref_src=twsrc%5Etfw%7Ctwcamp%5Etweetembed%7Ctwterm%5E1616285401135579137%7Ctwgr%5E61206a51b5253dcaa9f5aac2ac4a936c1e2bd2c7%7Ctwcon%5Es1_&ref_url=https%3A%2F%2Fwww.india.com%2Fviral%2Fviral-woman-edge-deep-victoria-falls-video-waterfall-niagara-trending-5863644%2F