ಈ ಬಾರಿ ದೇಶದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೀಗಾಗಿ ಎಸಿ, ಫ್ರಿಡ್ಜ್ ಖರೀದಿಯಲ್ಲಿ ಹೆಚ್ಚಳವಾಗಿದೆ. ಇದರ ಮಧ್ಯೆ ಕಳೆದ ಏಪ್ರಿಲ್ ನಲ್ಲಿ ಕಂಪನಿಗಳು ಇವುಗಳ ಬೆಲೆ ಏರಿಕೆ ಮಾಡಿದ್ದವು. ಜೊತೆಗೆ ಟಿವಿ ಬೆಲೆಯೂ ಸಹ ಏರಿಕೆಯಾಗಿತ್ತು. ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬಿಡಿ ಭಾಗಗಳ ಕೊರತೆ, ಬಿಡಿಭಾಗಗಳನ್ನು ಹೊತ್ತು ತರುತ್ತಿದ್ದ ಕಂಟೈನರ್ ಚೀನಾದ ಶಾಂಘೈನಲ್ಲಿ ಸಿಲುಕಿಕೊಂಡಿರುವುದು ಸೇರಿದಂತೆ ಇನ್ನೂ ಹಲವು ಕಾರಣಗಳಿಗಾಗಿ ಸದ್ಯದಲ್ಲೇ ಎಸಿ, ಫ್ರಿಡ್ಜ್ ಹಾಗೂ ಟಿವಿ ಬೆಲೆಗಳು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇವುಗಳ ಬೆಲೆ ಶೇಕಡ ಹತ್ತರಷ್ಟು ಹೆಚ್ಚಳವಾಗಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ತುರ್ತು ಸಹಾಯವಾಣಿಗೆ ಕರೆ ಮಾಡಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಭೂಪ…!
ಎಸಿ ಹಾಗೂ ಫ್ರಿಡ್ಜ್ ಗೆ ಬೇಕಾಗುವ ಕಂಪ್ರೆಸರ್ ಗಳ ಪೈಕಿ ಶೇಕಡ 70ರಷ್ಟು ಚೀನಾದಿಂದಲೇ ಬರಬೇಕಾಗಿದ್ದು, ಈ ಅವಲಂಬನೆ ಬೆಲೆಯೇರಿಕೆಗೆ ಮತ್ತೊಂದು ಕಾರಣವಾಗಿದೆ. ದೇಶಿಯ ಮಾರುಕಟ್ಟೆ ಮೂಲಕ ಬಿಡಿಭಾಗಗಳು ಶೇಕಡಾ 30ರಷ್ಟು ಲಭ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಎಸಿ, ಫ್ರಿಡ್ಜ್ ಹಾಗೂ ಟಿವಿ ಇಂದು ದೈನಂದಿನ ಅವಿಭಾಜ್ಯ ಅಂಗವಾಗಿದ್ದು, ಈ ಹಿಂದಿನಂತೆ ಐಷಾರಾಮಿ ವಸ್ತುಗಳಾಗಿ ಉಳಿದಿಲ್ಲ. ಹಾಗಾಗಿ ಇವುಗಳ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವುದು ನಿಶ್ಚಿತ.