ಜನಾಂಗೀಯ ದಾಳಿ ವರದಿ ಮಾಡುತ್ತಲೇ ಕಣ್ಣೀರು ಹರಿಸಿದ ಆಂಕರ್: 2 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ 20-05-2022 11:11AM IST / No Comments / Posted In: Latest News, Live News, International ಅಮೆರಿಕಾದ ಬಫಲೋದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 18 ವರ್ಷದ ಯುವಕನೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ಹತ್ತು ಮಂದಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಮೇ 14 ರ ಶನಿವಾರದಂದು ಜನಾಂಗೀಯ ಪ್ರೇರಿತ ದಾಳಿ ಸಂಭವಿಸಿದೆ. ಟಾಪ್ಸ್ ಫ್ರೆಂಡ್ಲಿ ಮಾರ್ಕೆಟ್‌ನಲ್ಲಿ ಪೇಟನ್ ಜೆಂಡ್ರಾನ್ ಎಂಬ ಯುವಕ ಫೈರಿಂಗ್ ಮಾಡಿದ್ದಾನೆ. ದುರ್ಘಟನೆಯಲ್ಲಿ 10 ಜನರು ಹತ್ಯೆಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಸಾಮೂಹಿಕ ಶೂಟಿಂಗ್ ನಡೆದ ಸ್ಥಳದಿಂದ ಘಟನೆಯ ಕುರಿತು ಲೈವ್ ವರದಿ ಮಾಡುತ್ತಾ, ವಿಕ್ಟರ್ ಬ್ಲ್ಯಾಕ್‌ವೆಲ್ ಎಂಬ ಸಿಎನ್ಎನ್ ಚಾನೆಲ್ ಆಂಕರ್ ಕಣ್ಣೀರು ಹರಿಸಿದ್ದಾರೆ. ಇಡೀ ಸನ್ನಿವೇಶದ ವಿಡಿಯೋವನ್ನು ಎನ್ಬಿಸಿ ಯುನಿವರ್ಸಲ್‌ನ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ವಿಕ್ಟರ್ ಬ್ಲ್ಯಾಕ್‌ವೆಲ್ ಶೂಟಿಂಗ್‌ನ ಪ್ರತ್ಯಕ್ಷದರ್ಶಿಯೊಬ್ಬರೊಂದಿಗೆ ಮಾತನಾಡುವುದನ್ನು ಕಾಣಬಹುದು. ಈ ಬಗ್ಗೆ ಚರ್ಚಿಸುತ್ತಿದ್ದಾಗ ಆಂಕರ್ ವಿಕ್ಟರ್ ಬ್ಲ್ಯಾಕ್‌ವೆಲ್ ಹತ್ಯಾಕಾಂಡವನ್ನು ವರದಿ ಮಾಡುತ್ತಾ, ತಡೆಯಲಾಗದೆ ಕಣ್ಣೀರು ಹರಿಸಿದ್ದಾರೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ, ವಿಡಿಯೋ ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯೆಗಳ ಅಲೆಯನ್ನೇ ಹರಿಸಿದ್ದಾರೆ. “I’ve done 15 of these.” CNN Anchor Victor Blackwell breaks down in tears reporting from the scene of the Buffalo mass shooting. pic.twitter.com/fAy6s7VWuN — Mike Sington (@MikeSington) May 16, 2022