ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಹೈರಾಣಾಗಿ ಹೋಗಿದ್ದಾರೆ. ಪೆಟ್ರೋಲ್ – ಡೀಸೆಲ್ ಬೆಲೆಯೂ ಗಗನ ಮುಟ್ಟಿದ್ದು, ಇದೀಗ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ.
ಹೌದು, ಕಚ್ಚಾ ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳ ಒಕ್ಕೂಟ ‘ಒಪೆಕ್ ಪ್ಲಸ್’ ಮಹತ್ವದ ಬೆಳವಣಿಗೆ ಒಂದರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದರ ಪರಿಣಾಮ ಸೋಮವಾರದಂದು ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.
ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತಿದ್ದು, ಒಂದೊಮ್ಮೆ ಕಚ್ಚಾ ತೈಲದ ಬೆಲೆ ಏರಿಕೆ ಮತ್ತಷ್ಟು ಹೆಚ್ಚಾದರೆ ಇದರ ಹೊರೆ ನಿಶ್ಚಿತವಾಗಿಯೂ ವಾಹನ ಸವಾರರ ಮೇಲೆ ಬೀಳಲಿದೆ.