ಮುಂದೆ ಗುರಿ, ಹಿಂದೆ ಗುರು ಇದ್ದಾಗ ಯಶಸ್ಸು ನಿಶ್ಚಿತ ಅನ್ನೋ ಮಾತಿದೆ. ಆದರೆ ಗುರಿ ತೋರಿಸಬೇಕಾದ ಗುರುವಿಗೆನೇ ಜ್ಞಾನ ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹೇಗಿರಬಹುದು ? ಅಂದಾಜಿಸೋದಕ್ಕೂ ಕಷ್ಟವಾಗಿ ಬಿಡುತ್ತೆ. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಲಾ ಶಿಕ್ಷಕಿಗೆ ರಿಪೋರ್ಟರ್ ಒಂದು ಪ್ರಶ್ನೆಯನ್ನ ಕೇಳುತ್ತಾನೆ. ಆ ಪ್ರಶ್ನೆಗೆ ಶಿಕ್ಷಕಿ ಕೊಟ್ಟ ಉತ್ತರ ಕೇಳ್ತಿದ್ರೆ ಎಂಥವರೂ ಕೂಡಾ ಶಾಕ್ ಆಗಿ ಬಿಡ್ತಾರೆ.
ಶಾಲೆಯೊಂದಕ್ಕೆ ವರದಿಗೆ ಹೋದ ವರದಿಗಾರ ಅಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಗೆ ಇಂಗ್ಲಿಷ್ನಲ್ಲಿ ಜನವರಿಗೆ ಏನು ಹೇಳುತ್ತಾರೆ ಎಂದು ಕೇಳುತ್ತಾನೆ. ವರದಿಗಾರ ತನಗೆ ಈ ಪ್ರಶ್ನೆ ಕೇಳಬಹುದು ಅನ್ನೋ ನಿರೀಕ್ಷೆಯಲ್ಲಿ ಇರದ ಶಿಕ್ಷಕಿ, ಉತ್ತರ ಕೊಡಲು ತಡವರಿಸುತ್ತಾಳೆ. ತಕ್ಷಣವೇ ಆಕೆ ಮಕ್ಕಳಿಗೆ ಕೇಳಿ, ಮಕ್ಕಳೇ ಇದಕ್ಕೆ ಉತ್ತರ ಕೊಟ್ಟು ಬಿಡುತ್ತಾರೆ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ. ತುಂಬಾ ಒತ್ತಾಯಿಸಿದರೂ ಶಿಕ್ಷಕಿ ಉತ್ತರ ಕೊಡದಿದ್ದಾಗ ಅಲ್ಲೇ ಇದ್ದ ಮಕ್ಕಳಿಗೆ ಜನವರಿ ಸ್ಪೆಲ್ಲಿಂಗ್ ಏನು ಎಂದು ಆ ವರದಿಗಾರ ಕೇಳುತ್ತಾನೆ. ಮಕ್ಕಳು ಜನವರಿ ತಿಂಗಳ ಸ್ಪೆಲ್ಲಿಂಗ್ ಹೇಳುವುದಕ್ಕೆ ಪ್ರಯತ್ನಿಸಿದರೂ ಅದು ತಪ್ಪಾಗಿರುತ್ತೆ. ಆ ನಂತರ ಶಿಕ್ಷಕಿಗೆ ಮತ್ತೆ ಅದೇ ಪ್ರಶ್ನೆಯನ್ನ ಕೇಳಲಾಗುತ್ತೆ. ಆಕೆಯೂ ತಪ್ಪು ತಪ್ಪಾಗಿ ಉತ್ತರ ಕೊಡುತ್ತಾರೆ.
ಇದು ತಮಾಷೆಯ ವಿಡಿಯೋ ಅಂತ ಅನಿಸಿದರೂ ವಾಸ್ತವ. ಗ್ರಾಮೀಣ ಶಾಲೆಗಳಲ್ಲಿ ಇದು ಸಾಮಾನ್ಯ ಅನ್ನುವ ಹಾಗಾಗಿದೆ. ಅಷ್ಟೆ ಅಲ್ಲ ಹಲವು ಸರ್ಕಾರಿ ಶಾಲೆಗಳಲ್ಲೂ ಕಾಟಾಚಾರಕ್ಕಾಗಿ ಪಾಠ ಮಾಡಲಾಗುತ್ತಿದೆ. ಶಿಕ್ಷಕರೂ ಕೂಡಾ ತಮಗೆ ಮನಸ್ಸಿಗೆ ಬಂದ ಹಾಗೆ ಪಾಠ ಹೇಳುತ್ತಿದ್ದಾರೆ ಅನ್ನೋದಕ್ಕೆ ಈ ವಿಡಿಯೋ ಬೆಸ್ಟ್ ಎಗ್ಸಾಂಪಲ್.
ಸದ್ಯಕ್ಕೆ ಈ ವಿಡಿಯೋ 10,000ಕ್ಕೂ ಹೆಚ್ಚು ವೀಕ್ಷಣೆ ಮತ್ತು 500ಕ್ಕೂ ಲೈಕ್ಸ್ ಪಡೆದಿದೆ. ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಹಾಕಿದ್ದಾರೆ. ಆದರೆ, ಕಲಿಕೆ ಎನ್ನುವುದು ವಾತಾವರಣಕ್ಕೆ ಸಂಬಂಧಿಸಿದ್ದು. ಈ ವಿಡಿಯೋ ನೋಡಿ ನಕ್ಕು ಸುಮ್ಮನಿರಲಾಗದು. ಹಾಗೆಯೇ ಪ್ರಶ್ನಿಸಿದ ವರದಿಗಾರರನ್ನೂ. ಇದು ಗಂಭೀರ ವಿಷಯವೇ. ಪಾಪ ಹಳ್ಳಿಗಾಡಿನ ಮಕ್ಕಳು……ಎಂದು ವರದಿಗಾರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
https://youtu.be/QYVfeH9Jf8I