alex Certify ಜನವರಿ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದ RBI

ಅಂತೂ 2021 ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.‌ ಹೊಸ ವರ್ಷವಾದ್ರು ಹಳೆ ಕೆಲಸಗಳ ಬಗ್ಗೆ ಗಮನ ಹರಿಸಲೆಬೇಕಾಗುತ್ತದೆ. ಜನವರಿ ತಿಂಗಳಲ್ಲಿ ನಿಮಗೇನಾದ್ರು ಬ್ಯಾಂಕ್ ನಲ್ಲಿ ಕೆಲಸವಿದ್ದರೆ, ನೀವು ಈ ಸುದ್ದಿಯನ್ನ ಓದಲೆಬೇಕು.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2022 ರ ಜನವರಿಯಲ್ಲಿ ಎಷ್ಟು ದಿನ, ಯಾವ‌ ದಿನಾಂಕದಂದು ರಜೆ‌ ಇದೆ ಎಂದು ತಿಳಿಯೋಣ.

ತಿಂಗಳ ಎರಡನೇ ಶನಿವಾರದಂದು ಯಾವಾಗಲೂ ರಜೆ ಇರುತ್ತದೆ, ಆದರೆ ಅದನ್ನು ಹೊರತುಪಡಿಸಿ, ಯಾವ ರಾಜ್ಯಗಳಿಗೆ ರಜೆ ಇರುತ್ತದೆ ಎಂಬ ಮಾಹಿತಿ ಇಲ್ಲಿದೆ.‌ ಭಾರತದಲ್ಲಿನ ಬ್ಯಾಂಕುಗಳು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಲ್ಪಡುತ್ತವೆ.

ಹೆಚ್ಚುವರಿಯಾಗಿ, ರಾಷ್ಟ್ರೀಯ ರಜಾದಿನಗಳು, ಸಾರ್ವಜನಿಕ ರಜಾದಿನಗಳು ಮತ್ತು ಪ್ರಾದೇಶಿಕ ರಜಾದಿನಗಳಲ್ಲಿ (ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ) ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಎರಡನೇ ಶನಿವಾರ, ನಾಲ್ಕನೇ‌ ಶನಿವಾರ, ಭಾನುವಾರ ಜೊತೆಗೆ ಹಬ್ಬಗಳು, ಕಡ್ಡಾಯ ರಜೆಗಳನ್ನ ಸೇರಿ ಒಟ್ಟು ಹದಿನಾರು ದಿನಗಳು ಬ್ಯಾಂಕ್ ಮುಚ್ಚಲಿದೆ.

ನೂರಾರು ಕೋಟಿ ಲೋನ್ ಕೊಡಿಸುವುದಾಗಿ ವಂಚನೆ, ಐವರು ಆರೋಪಿಗಳು ಅಂದರ್

ಜನವರಿಯಲ್ಲಿ ರಜಾ ದಿನಗಳ ಪಟ್ಟಿ

ಜನವರಿ 1 ಶನಿವಾರ ದೇಶಾದ್ಯಂತ ಹೊಸ ವರ್ಷದ ದಿನ

ಜನವರಿ 2 ಭಾನುವಾರ ದೇಶದಾದ್ಯಂತ ರಜೆ

9 ಜನವರಿ ಭಾನುವಾರ ದೇಶಾದ್ಯಂತ ಗುರು ಗೋವಿಂದ್ ಸಿಂಗ್ ಜಯಂತಿ

11 ಜನವರಿ ಮಂಗಳವಾರ ಮಿಷನರಿ ದಿನ (ಮಿಜೋರಾಂ)

14 ಜನವರಿ ಶುಕ್ರವಾರ ಮಕರ ಸಂಕ್ರಾಂತಿ (ಅನೇಕ ರಾಜ್ಯಗಳು)

ಜನವರಿ 15 ಶನಿವಾರ ಪೊಂಗಲ್ (ಆಂಧ್ರ ಪ್ರದೇಶ, ಪುದುಚೇರಿ, ತಮಿಳುನಾಡು)

16 ಜನವರಿ ಭಾನುವಾರ ರಜೆ

23 ನೇ ಜನವರಿ ಭಾನುವಾರ:ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ, ದೇಶಾದ್ಯಂತ ವಾರದ ರಜೆ

25 ಜನವರಿ ಮಂಗಳವಾರ ರಾಜ್ಯ ಸಂಸ್ಥಾಪನಾ ದಿನ ಹಿಮಾಚಲ ಪ್ರದೇಶ

ಜನವರಿ 26 ಬುಧವಾರ ದೇಶಾದ್ಯಂತ ಗಣರಾಜ್ಯೋತ್ಸವ

31ನೇ ಜನವರಿ ಸೋಮವಾರ ಡ್ಯಾಮ್-ಮಿ-ಫೈ (ಅಸ್ಸಾಂ)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...