ಹಾವೇರಿ: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರ್ತಾ ಇದೆ. ಜನ, ದನ, ಕರುಗಳ ಮೇಲೆ ದಾಳಿ ಮಾಡ್ತಾ ಇವೆ. ಆದರೆ ಇವುಗಳನ್ನ ಹಿಡಿಯೋದಿಕ್ಕೆ ಅಧಿಕಾರಿಗಳು ವಿಫಲವಾಗ್ತಾ ಇದ್ದಾರೆ. ಇದೀಗ ಹಾವೇರಿಯ ರಾಣೆಬೆನ್ನೂರಿನ ಜನತೆಗೆ ಚಿರತೆ ನಿದ್ದೆಗೆಡಿಸಿದೆ.
ಹೌದು, ರಾಣೆಬೇನ್ನೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದ ಭಾಗದಲ್ಲಿ ಚಿರತೆ ಓಡಾಡ್ತಾ ಇರೋದು ಗೊತ್ತಾಗಿದೆ. ಈ ಗ್ರಾಮದ ಹಸುವೊಂದನ್ನು ತಿಂದು ಹಾಕಿದೆ ಚಿರತೆ. ಹಸುವನ್ನು ತಿಂದಿರುವ ದೃಶ್ಯ ಫಾರ್ಮ್ ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ವಿಡಿಯೋ ಸಿಕ್ಕ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಷ್ಟು ದಿನ ಚಿರತೆ ಇದೆ ಎಂದು ಹೇಳಲಾಗಿತ್ತಾದರೂ ಎಲ್ಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಸಿಸಿ ಟಿವಿ ವಿಡಿಯೋದಲ್ಲಿ ಚಿರತೆಯ ವ್ಯಾಘ್ರತೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಕೂಡಲೇ ಚಿರತೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಅಲ್ಲಿನ ಜನ ಮನೆಬಿಟ್ಟು ಆಚೆ ಬರೋದಿಕ್ಕೂ ಭಯ ಪಡುವಂತ ವಾತಾವರಣ ನಿರ್ಮಾಣ ಆಗಿದೆ.