
ನಿಲ್ದಾಣದಲ್ಲಿ ಜನರು ಯಾರೂ ಇಲ್ಲದಿದ್ದರೂ ಕೂಡ ಸರ್ಬಿಯಾದ ಅಧ್ಯಕ್ಷರು ಕೈ ಬೀಸುತ್ತಿರುವ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ರೈಲಿನಲ್ಲಿ ಅಧ್ಯಕ್ಷ ವುಸಿಕ್ ಮತ್ತು ಪ್ರಧಾನಿ ಓರ್ಬನ್ ಇಬ್ಬರೂ ಪರಸ್ಪರ ಎದುರು ಬದುರು ಕುಳಿತುಕೊಂಡು ಹೊರಗೆ ಕೈ ಬೀಸಿದ್ದಾರೆ. ಆದರೆ, ಪ್ಲಾಟ್‌ಫಾರ್ಮ್‌ನಲ್ಲಿ ಯಾರೂ ಕೂಡ ಇರುವುದಿಲ್ಲ.
ಟ್ವಿಟ್ಟರ್ ಬಳಕೆದಾರರಾದ ಯುಗೊಪ್ನಿಕ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸುವ ಮುಖಾಂತರ ವೈರಲ್ ಆಗಿದೆ. ಹೊಸ ರೈಲು ಮಾರ್ಗವನ್ನು ಉದ್ಘಾಟಿಸಿದ ವೇಳೆ ಸರ್ಬಿಯಾ ಅಧ್ಯಕ್ಷರು ಜನರತ್ತ ಕೈಬೀಸಿದ್ದಾರೆ. ಆದರೆ ಅಲ್ಲಿ ಯಾರೂ ಕೂಡ ಇಲ್ಲ ಅನ್ನೋದನ್ನು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ತಮಾಷೆ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
75 ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ಚೀನಾ ಮತ್ತು ರಷ್ಯಾದ ಕಂಪನಿಗಳು ನಿರ್ಮಿಸಿವೆ ಎಂದು ಸರ್ಬಿಯಾದ ಅಧ್ಯಕ್ಷರು ಹೇಳಿದ್ದಾರೆ. ಜರ್ಮನ್ ಕಂಪನಿಗಳು ಸಿಸಿ ಟಿವಿ ಕ್ಯಾಮರಾಗಳನ್ನು ಸ್ಥಾಪಿಸಿವೆ. ಹಾಗೂ ರೈಲುಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ತಯಾರಿಸಲಾಯಿತು.