ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ.
ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. ಪಶ್ಚಿಮದಲ್ಲಿ ಜಾವಾ, ಪೂರ್ವದಲ್ಲಿ ಲೊಂಬೊಲ್ ದ್ವೀಪಗಳಿವೆ.
ಈ ದ್ವೀಪದಲ್ಲಿ ಬಹುತೇಕರು ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ. ಹಾಗಾಗಿ ಇಲ್ಲಿ ಭಾರತೀಯ ಸಂಸ್ಕೃತಿಯನ್ನು ಕಾಣಬಹುದಾಗಿದೆ.
ಬಾಲಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಾಲಿಯಲ್ಲಿ ಪ್ರವಾಸೋದ್ಯಮ ಸಂಬಂಧಿತ ವ್ಯವಹಾರ ಆರ್ಥಿಕತೆಯ ಶೇ. 80 ರಷ್ಟು ಪಾಲು ಹೊಂದಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಚರ್ಮ, ಲೋಹದ ಕೆಲಸ, ಸಂಗೀತವನ್ನು ಒಳಗೊಂಡಂತೆ ಹೆಚ್ಚು ಅಭಿವೃದ್ಧಿ ಹೊಂದಿದ ಕಲೆಗಳಿಗೆ ಹೆಸರುವಾಸಿಯಾಗಿದೆ.
ಮಾರ್ಚ್ 2017 ರಲ್ಲಿ ಟ್ರಿಪ್ ಅಡ್ವೈಸರ್ ಪ್ರಯಾಣಿಕರ ಆಯ್ಕೆ ಪ್ರಶಸ್ತಿಯಲ್ಲಿ ಬಾಲಿದ್ವೀಪಕ್ಕೆ ವಿಶ್ವದಲ್ಲಿ ಅಗ್ರಸ್ಥಾನವನ್ನು ನೀಡಲಾಗಿದೆ.
ಇಲ್ಲಿನ ಬಾಲಿ ಕೋರಲ್(ಹವಳ) ಪ್ರದೇಶ ಸಮುದ್ರದ ವೈವಿಧ್ಯತೆಯನ್ನು ಒಳಗೊಂಡಿದೆ. ಬಾಲಿಯಲ್ಲಿ ಚಿಲುಮೆಯೊಂದರ ನೀರಲ್ಲಿ ಸ್ನಾನ ಮಾಡಿದರೆ ಮೈ ಮನಸ್ಸಿನ ಜೊತೆಗೆ ಆತ್ಮವೂ ಶುದ್ಧಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಹಿಂದೂಗಳಲ್ಲಿದೆ.
ಪ್ರಕೃತಿಯಲ್ಲಿ ದೇವರನ್ನು ಕಾಣಬೇಕೆಂಬ ನಂಬಿಕೆಗೆ ಅನುಗುಣವಾಗಿ ಈ ಪ್ರದೇಶವಿದೆ. ದೇವರಿಗೂ ಆಕರ್ಷವೆನಿಸುವಷ್ಟು ಚೆಂದದ ದ್ವೀಪವಾಗಿದೆ ಬಾಲಿ.
ಉಬುಡ್ ಸಮೀಪದ ಮನುಕಯಾ ಪ್ರಾಂತ್ಯದ ತಂಪಕ್ ಸಿರಿಂಗ್ ನಲ್ಲಿರುವ ದೇವಾಲಯ, ಚಿಲುಮೆ ಬಾಲಿಯ ಜನರ ನಂಬಿಕೆಯ ಸ್ಥಳಗಳಾಗಿವೆ.
ನೀವು ಒಮ್ಮೆ ಬಾಲಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಸವಿದು ಬನ್ನಿ. ಅಂತರರಾಷ್ಟ್ರೀಯ ಪ್ರವಾಸಗಳನ್ನು ಆಯೋಜಿಸುವ ಸಂಸ್ಥೆಗಳನ್ನು ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಮಾಹಿತಿ ಪಡೆದು ಪೂರ್ವ ಸಿದ್ಧತೆಯೊಂದಿಗೆ ಪ್ರವಾಸ ಕೈಗೊಳ್ಳಿ.