ಅಧಿಕ ತೂಕ ಹೊಂದಿರುವ ಮಕ್ಕಳಿಗೆ ಆಹಾರ ಅಲರ್ಜಿ ಕಾಡುವುದು ಹೆಚ್ಚೆಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಜನನದ ವೇಳೆ ಮಕ್ಕಳ ತೂಕ, ಗರ್ಭಧಾರಣೆ ಸಮಯ, ಮಕ್ಕಳು ಹಾಗೂ ವಯಸ್ಕರ ಅಲರ್ಜಿ ಕಾಯಿಲೆಗಳನ್ನು ವಿಶ್ಲೇಷಿಸಿದ್ದೇವೆಂದು ಅವರು ಹೇಳಿದ್ದಾರೆ. ಜನನ ತೂಕದಲ್ಲಿ ಪ್ರತಿ ಕಿಲೋಗ್ರಾಂ ಹೆಚ್ಚಳವು ಮಗುವಿನ ಆಹಾರ ಅಲರ್ಜಿಯ ಶೇಕಡಾ 44 ರಷ್ಟು ಅಪಾಯವನ್ನು ಹೆಚ್ಚಿಸುತ್ತದೆ. ಎಸ್ಜಿಮಾದ ಶೇಕಡಾ 17ರಷ್ಟು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂಶೋಧನೆ ಬಹುಪಾಲು ಅಭಿವೃದ್ಧಿ ಹೊಂದಿದ ದೇಶದಲ್ಲಿ ನಡೆದಿದೆ. ಯುರೋಪಿಯನ್ ದೇಶಗಳಲ್ಲಿ ಹೆಚ್ಚು ಸಂಶೋಧನೆ ನಡೆದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.