alex Certify ಜಗಳಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ಈ ʼವಸ್ತುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗಳಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ಈ ʼವಸ್ತುʼ

ಮೂರು ವಿಷ್ಯಗಳು ಮನೆಯ ಸಂತೋಷಕ್ಕೆ ಕಾರಣವಾಗುತ್ತವೆ. ಮನೆಯ ಬಣ್ಣ, ಮನೆಯ ತರಂಗ, ಮನೆಯಲ್ಲಿ ವಾಸವಾಗುವ ಜನರು. ಈ ಮೂರರಲ್ಲಿ ಎರಡು ಸರಿಯಿದ್ರೆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಇಲ್ಲವಾದ್ರೆ ಗಲಾಟೆ, ಜಗಳ, ಅಶಾಂತಿ, ಕೋಪ ಮನೆ ಮಾಡಿರುತ್ತದೆ. ಕೆಲವೊಮ್ಮೆ ನಾವು ಮನೆಗೆ ತರುವ ವಸ್ತುಗಳು ಹಾಗೂ ಮನೆಗೆ ಬರುವ ವ್ಯಕ್ತಿಗಳು ಕೂಡ ಮನೆಯ ಶಾಂತಿ ಕೆಡಿಸುತ್ತಾರೆ.

ಮನೆಗೆ ಯಾವಾಗ್ಲೂ ತಿಳಿ ಬಣ್ಣ ಮತ್ತು ಸುಂದರ ಬಣ್ಣವನ್ನು ಬಳಿಯಬೇಕು. ಲೀವಿಂಗ್ ರೂಮಿನಲ್ಲಿ ತಿಳಿ ಗುಲಾಬಿ, ಹಳದಿ ಅಥವಾ ಹಸಿರು ಬಣ್ಣವನ್ನು ಹಚ್ಚಬೇಕು. ಅಡುಗೆ ಮನೆಗೆ ಕಿತ್ತಳೆ ಬಣ್ಣ ಹೆಚ್ಚು ಶುಭಕರ. ಬೆಡ್ ರೂಮಿನಲ್ಲಿ ಗುಲಾಬಿ, ನೇರಳೆ ಅಥವಾ ಹಸಿರು ಬಣ್ಣವನ್ನು ಹಚ್ಚಬೇಕು. ಛಾವಣಿ ಬಣ್ಣ ಸದಾ ಬಿಳಿಯದಾಗಿರಬೇಕು.

ಮನೆಯಲ್ಲಿರುವ ವಸ್ತು ಹಾಗೂ ವ್ಯಕ್ತಿಗಳಿಂದ ತರಂಗದ ನಿರ್ಮಾಣವಾಗುತ್ತದೆ. ಮನೆಯಲ್ಲಿ ಅನುಪಯುಕ್ತ ವಸ್ತುಗಳನ್ನು ಇಡಬೇಡಿ. ಮನೆಗೆ ಬೆಳಕು, ಗಾಳಿ ಸರಿಯಾಗಿ ಪ್ರವೇಶ ಮಾಡುವಂತೆ ನೋಡಿಕೊಳ್ಳಿ. ಮನೆಯಲ್ಲಿ ಹಳಸಿದ ಆಹಾರ, ಹಾಳಾದ ಚಪ್ಪಲಿ ಇಡುವುದು ಸೂಕ್ತವಲ್ಲ. ವೇಗದ ಸಂಗೀತ, ಕಿರುಚಾಟ, ಅಸ್ತವ್ಯಸ್ತ ಮನೆ ನೆಮ್ಮದಿ ಹಾಳು ಮಾಡುತ್ತದೆ.

ಮನೆಯಲ್ಲಿರುವ ಜನರು ಮನೆ ನೆಮ್ಮದಿಗೆ ಮುಖ್ಯ ಕಾರಣವಾಗ್ತಾರೆ. ಮನೆ ಜನರ ವ್ಯವಹಾರ ಸರಿಯಾಗಿರಬೇಕು. ಅಪಶಬ್ಧಗಳ ಪ್ರಯೋಗ ಮಾಡಬಾರದು. ಸೋಮಾರಿತನ ಮಾಡಬೇಡಿ. ಮನೆಯಲ್ಲಿ ಮದ್ಯಪಾನ ಮಾಡಬೇಡಿ. ಜೂಜಾಟ ಆಡಬೇಡಿ. ಮನೆಯ ವಸ್ತುಗಳನ್ನು ಸರಿಯಾಗಿಡಲು ಪ್ರಯತ್ನಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...